Monday, May 23, 2022
Powertv Logo
Homeರಾಜ್ಯಕರಗ ಕಣ್ತುಂಬಿಕೊಂಡ ಭಕ್ತರು

ಕರಗ ಕಣ್ತುಂಬಿಕೊಂಡ ಭಕ್ತರು

ಬೆಂಗಳೂರು: ಪ್ರಮುಖ ಧಾರ್ಮಿಕ ಆಚರಣೆಯಾಗಿರುವ ಬೆಂಗಳೂರಿನ ಐತಿಹಾಸಿಕ ಧರ್ಮರಾಯಸ್ವಾಮಿ ಕರಗ ಶ್ರದ್ಧಾಭಕ್ತಿಯಿಂದ ನಡೆಯಿತು .ದರ್ಗಾಕ್ಕೆ ಭೇಟಿ ನೀಡುವ ಸಂಪ್ರದಾಯವನ್ನೂ ಅನುಸರಿಸಲಾಯಿತು .

ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು .ಎರಡು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಅದ್ಧೂರಿ ಕರಗ ಉತ್ಸವ ನಡೆಯಿತು . ದೇಗುಲ ಆವರಣದಲ್ಲಿ ಧಾರ್ಮಿಕ ವಿಧಿಗಳು ನಡೆದವು. ನಸುಕಿನ ಎರಡು ಗಂಟೆ ವೇಳೆಗೆ ತಾಯಿ ದ್ರೌಪದಿ ದೇವಿಯ ಅಪ್ಪಣೆಯ ನಂತರ ಕರಗವನ್ನು ಭಕ್ತರು ಕಣ್ಣುತುಂಬಿಕೊಂಡರು.

- Advertisment -

Most Popular

Recent Comments