ಬೆಂಗಳೂರು ರೆಡ್ ಲೈಟ್ ಸಿಟಿ ಆಗ್ತಿದ್ಯಾ? ನೈಜೀರಿಯನ್ಸ್ ಇಲ್ಲಿ ಏನ್ ಮಾಡ್ತಿದ್ದಾರೆ ಗೊತ್ತಾ?

0
218

ಸಿಲಿಕಾನ್ ಸಿಟಿ, ಐಟಿ ಸಿಟಿ ಅಂತೆಲ್ಲಾ ಕರೆಸಿಕೊಳ್ತಿರೋ ನಮ್ಮ ಬೆಂಗಳೂರು ಇದೀಗ ರೆಡ್ ಲೈಟ್ ಸಿಟಿ ಆಗ್ತಿದ್ಯಾ ಅನ್ನೋ ಅನುಮಾನ ಕಾಡ ತೊಡಗಿದೆ‌.

ನೈಜೀರಿಯನ್ ಪ್ರಜೆಗಳು ವೇಶ್ಯಾವಾಟಿಕೆ ನಡೆಸ್ತಿದ್ದಾರೆ ಅನ್ನೋ ಆರೋಪ ಕೇಳಿಬರ್ತಿದ್ದು, ಬೆಂಗಳೂರು ರೆಡ್ ಲೈಟ್ ಸಿಟಿ ಆಗಲಿದೆ ಅನ್ನುವ ಆತಂಕ ಉಂಟಾಗಿದೆ‌.

ಕಮ್ಮನಹಳ್ಳಿ ಮೇನ್ ರೋಡ್ ಬಳಿ ಇರೋ ಬಸ್ ಸ್ಟಾಪ್ ಹತ್ತಿರ ನೈಜೀರಿಯನ್ನರು ಈ ಕೆಲಸ ಮಾಡ್ತಿದ್ದಾರೆ ಎನ್ನಲಾಗಿದೆ. ‌ಬಸ್ ಸ್ಟಾಪ್ ಹತ್ರ ನಿಂತು ವೇಶ್ಯಾವಾಟಿಕೆಗೆ ಆಹ್ವಾನಿಸ್ತಿದ್ದಾರೆ ಅಂತ ತಿಳಿದುಬಂದಿದೆ.

ರಾತ್ರಿ ಹೊತ್ತು ರಸ್ತೇಲಿ ನಡ್ಕೊಂಡು ಹೋಗೋ ಪುರುಷರನ್ನು ಕೈ ಹಿಡಿದು ಅಸಭ್ಯವಾಗಿ ವರ್ತಿಸಿ, ಮಂಚಕ್ಕೆ ಕರೀತಾರಂತೆ.

ಕಳೆದ ನಾಲ್ಕು ದಿನಗಳ ಹಿಂದೆ ಇದನ್ನು ವಿರೋಧಿಸಿದ್ದ ಸ್ಥಳೀಯರಿಗೆ ನೈಜೀರಿಯನ್ಸ್ ಬೈದು ಎಸ್ಕೇಪ್ ಆಗಿದ್ರು ಅಂತ ಹೇಳಲಾಗ್ತಿದೆ‌‌.

LEAVE A REPLY

Please enter your comment!
Please enter your name here