Friday, September 30, 2022
Powertv Logo
Homeರಾಜ್ಯಒತ್ತಡ ನಿವಾರಣೆಗಾಗಿ 'ಡ್ರಮ್ಸ್' ಮೊರೆ ಹೋದ ಪೊಲೀಸರು..!

ಒತ್ತಡ ನಿವಾರಣೆಗಾಗಿ ‘ಡ್ರಮ್ಸ್’ ಮೊರೆ ಹೋದ ಪೊಲೀಸರು..!

ಬೆಂಗಳೂರು : ಇತ್ತೀಚೆಗೆ ಬಹುತೇಕರು ಸ್ಟ್ರೆಸ್​ನಿಂದ ಅನಾರೋಗ್ಯಕ್ಕೆ ತುತ್ತಾಗ್ತೀವಿ. ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಲು ನಾನಾ ರೀತಿಯಲ್ಲಿ ಕಸರತ್ತು ಮಾಡುವುದುಂಟು. ಇದೀಗ ಬೆಂಗಳೂರು ಪೊಲೀಸರು ಕೂಡಾ ಅಂತದ್ದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.  ಒತ್ತಡ ನಿವಾರಣೆಗೆ ನಿನ್ನೆ ಯಶವಂತಪುರದ ಓರಿಯಾನ್ ಮಾಲ್​ನಲ್ಲಿ ‘ಡ್ರಮ್ ಸರ್ಕಲ್’ ಈವೆಂಟ್ ಹಮ್ಮಿಕೊಂಡಿದ್ದರು.

ಈ ಈವೆಂಟ್​ನಲ್ಲಿ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಪಾಲ್ಗೊಂಡಿದ್ದರು . ಈ ಕಾರ್ಯಕ್ರಮವನ್ನು ಮೇಲಾಧಿಕಾರಿಗಳಿಗಲ್ಲದೆ ಎಲ್ಲಾ ಸೀನಿಯರ್ ಹಾಗೂ ಜೂನಿಯರ್​ಗಳಿಗಾಗಿ ಆಯೋಜಿಸಲಾಗಿತ್ತು. ಎಲ್ಲಾ ಪೊಲೀಸರು ಈವೆಂಟ್​ನಲ್ಲಿ ಪಾಲ್ಗೊಂಡು ಎಲ್ಲರೂ ಒಟ್ಟಾಗಿ ಕುಳಿತು ಡ್ರಮ್ಸ್​ ಬಾರಿಸಿದ್ರು. ಇನ್ನು ಡ್ರಮ್ಸ್ ಬಾರಿಸೋಕೆ ಬರಲ್ಲ ಅನ್ನೋರು ಡ್ರಮ್ಸ್​ಗೆ ತಕ್ಕಂತೆ ತಾಳ ಹಾಕಿ ಖುಷಿ ಪಟ್ಟಿದ್ದಾರೆ. ‘ಲಂಕೇಶ್ ಪ್ರತಿಕೆ’ ಖ್ಯಾತಿಯ ಸಿನಿಮಾ ನಟಿ ವಸುಂಧರಾ ದಾಸ್ ಪೊಲೀಸರಿಗೆ ಡ್ರಮ್ಸ್ ಬಾರಿಸುವುದನ್ನು ಹೇಳಿಕೊಟ್ಟರು.

 

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments