Home ರಾಜ್ಯ ಮೆಟ್ರೋ ಸ್ಟೇಷನ್​ಗೆ ಬಂದಿದ್ದ ಆ ವ್ಯಕ್ತಿ ಯಾರು ಗೊತ್ತಾ?

ಮೆಟ್ರೋ ಸ್ಟೇಷನ್​ಗೆ ಬಂದಿದ್ದ ಆ ವ್ಯಕ್ತಿ ಯಾರು ಗೊತ್ತಾ?

ಬೆಂಗಳೂರಲ್ಲಿ ಆತಂಕ ಸೃಷ್ಟಿಸಿದ್ದ ಎನ್ನಲಾದ ವ್ಯಕ್ತಿ ಪ್ರತ್ಯಕ್ಷರಾಗಿದ್ದಾರೆ. ಸ್ವತಃ ಅವರೇ ಡಿಸಿಪಿ ಕಚೇರಿಗೆ ಆಗಮಿಸಿ ವಿವರಣೆ ನೀಡಿದ್ದಾರೆ.
ಅವರ ಹೆಸರು ರಿಯಾಜ್ ಅಂತ. ಅವರೊಬ್ಬ ವಾಚ್​​ ವ್ಯಾಪಾರಿಯಾಗಿದ್ದು, ತನ್ನ ಬಗ್ಗೆ ಇಲ್ಲಸಲ್ಲದ ಆರೋಪ ಬಂದ ಹಿನ್ನೆಲೆಯಲ್ಲಿ ಸ್ವತಃ ಅವರೇ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಡಿಸಿಪಿ ರವಿ ಡಿ.ಚನ್ನಣ್ಣನವರ್ ಆ ವ್ಯಕ್ತಿಯ ವಿಚಾರಣೆ ಮಾಡಿ ಕೆಲವೊಂದು ಪ್ರಶ್ನೆಗಳಿಗೆ ಸ್ಪಷ್ಟನೆ ಪಡೆದಿದ್ದಾರೆ.
ಆ ವ್ಯಕ್ತಿ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ರವಿ ಡಿ ಚನ್ನಣ್ಣನವರ್​​, ”ಆ ವ್ಯಕ್ತಿ ತಾನಾಗಿಯೇ ಬಂದು ವಿವರಣೆ ನೀಡಿದ್ದಾರೆ. ರಿಯಾಜ್ ಅಹಮ್ಮದ್ ಅಂತ ನನ್ ಹೆಸ್ರು. ನಂಗೆ ಸುಮಾರು 45 ವರ್ಷ ವಯಸ್ಸು. ಮೆಜೆಸ್ಟಿಕ್​ನಲ್ಲಿ ವಾಚ್ ವ್ಯಾಪಾರ ಮಾಡ್ಕೊಂಡು ಇದ್ದೀನಿ. ಆದ್ರೆ ಕೆಲವು ಮಾಧ್ಯಮಗಳ ಸುದ್ದಿ ನೋಡಿ ಬೇಜಾರಿಗಿದೆ. ನನ್ನ ಶಂಕಿತ ಉಗ್ರ ಅಂತ ತೋರಿಸ್ತಾ ಇದ್ದಾರೆ. ನಂಗೆ ಇಬ್ರು ಮಕ್ಕಳು ಇದ್ದಾರೆ. ಉಗ್ರ ಅಂತ ಬಿಂಬಿಸಿದವರ ವಿರುದ್ಧ ಕ್ರಮಕೈಗೊಳ್ಳಿ ಅಂತ ದೂರು ನೀಡಿದ್ದಾರೆ” ಅಂತ ತಿಳಿಸಿದ್ರು.
ನಿನ್ನೆ ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಓರ್ವ ಅಪರಿಚಿತ ವ್ಯಕ್ತಿಯ ನಡೆ ಆತಂಕವನ್ನು ಸೃಷ್ಠಿ ಮಾಡಿತ್ತು. ಕೆಲವರು ಆತನನ್ನು ಉಗ್ರನೇ ಅನ್ನುವಂತೆ ಬಿಂಬಿಸಿದ್ದರು. ಆದರೆ ಪವರ್ ಟಿವಿ ಆರಂಭದಿಂದಲೂ ಆತಂಕದ ಸುದ್ದಿ ಪ್ರಸಾರ ಮಾಡಿರಲಿಲ್ಲ. ಅಂತೆ=ಕಂತೆಗಳನ್ನು ಹೇಳಿ ಜನರಲ್ಲಿ ಭಯ ಹುಟ್ಟಿಸೋ ಕೆಲಸವನ್ನು ಮಾಡಿರಲಿಲ್ಲ. ಯಾವ ಪೂರ್ವಗ್ರಹವೂ ಇಲ್ಲದೆ ಸುದ್ದಿಯನ್ನು ಪ್ರಸಾರ ಮಾಡಿತ್ತು.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments