ಬೆಂಗಳೂರು : ದಿನದಿಂದ ದಿನಕ್ಕೆ ಕೊರೋನಾ ಮರಣ ಮೃದಂಗ ಬೆಂಗಳೂರಿನಲ್ಲಿ ಹೆಚ್ಚುತ್ತಲೆ ಇದೆ. ಇದೀಗ ಹೇರ್ ಕಟ್ಟಿಂಗ್ ಮಾಲಿಕ ಕೊರೋನಾಗೆ ಸಾವನ್ನಪ್ಪಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಶಿವನಗರ ವಾರ್ಡ್ನ 45 ವರ್ಷದ ಪುರುಷ ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಪರೀಕ್ಷಿಸಿದಾಗ ಅವನಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ನೆನ್ನೆ ತಡರಾತ್ರಿ ಚಿಕಿತ್ಸೆ ಫಲಿಸದೆ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ವ್ಯಕ್ತಿ ಕಟ್ಟಿಂಗ್ ಶಾಪ್ ಇಟ್ಟುಕೊಂಡಿದ್ದು ಕೊರೋನಾ ನಡುವೆಯು ಹಲವರಿಗೆ ಹೇರ್ ಕಟ್ ಮಾಡಿದ್ದಾನೆ. ಇದೀಗ ಹೇರ್ ಕಟ್ಟಿಂಗ್ ಶಾಪ್ಗೆ ಹೋಗಿದ್ದವರಲ್ಲಿ ಆತಂಕ ಎದುರಾಗಿದೆ.