ಬೆಂಗಳೂರು : ರಾಜ್ಯದೆಲ್ಲೆಡೆ ಮಹಾಮಾರಿ ಕೊರೋನಾ ವೈರಸ್ ಮಿತಿ ಮೀರುತ್ತಿದ್ರೂ, ಆರೋಗ್ಯ ಇಲಾಖೆ ಮಾತ್ರ ಮತ್ತೆ ಮತ್ತೆ ನಿರ್ಲಕ್ಷ್ಯ ತೋರಿತ್ತಿದೆ. ಬೆಂಗಳೂರಿನ ಜೆಸಿ ನಗರದಲ್ಲಿ ಕೊವಿಡ್-19 ಸೋಂಕಿತ ವ್ಯಕ್ತಿಯ ಅಂತ್ಯ ಸಂಸ್ಕಾರದ ಬಳಿಕ ಪಿಪಿಇ ಕಿಟ್ ಅನ್ನ ಅಲ್ಲೇ ಬಿಟ್ಟು ಹೋಗಿದ್ದಾರೆ. ಆ ಪಿಪಿಇ ಕಿಟ್ ಈಗ ಗಾಳಿಗೆ ಹಾರಿ ಹೋಗಿ, ಅಕ್ಕಪಕ್ಕದ ಮನೆಗೆ ಸೇರುತ್ತಿದೆ. ಇದರಿಂದ ಜನರಿಗೆ ಮತ್ತಷ್ಟು ಭೀತಿ ಶುರುವಾಗಿದೆ. ಜೊತೆಗೆ
ಗುಂಡಿ ತೋಡಿದ ವ್ಯಕ್ತಿಗೆ ಪಿಪಿಇ ಕಿಟ್ ಕೊಡದೆ ನಿರ್ಲಕ್ಷ್ಯ ತೋರಿದ್ದಾರೆ. ಇದನ್ನ ಕಾರ್ಪೊರೇಟರ್ಗೆ ತಿಳಿಸಿದ್ರೆ ಕ್ಯಾರೇ ಎಂದಿಲ್ಲ. ಪೊಲೀಸರಿಗೆ ಮಾಹಿತಿ ತಿಳಿಸಿದ ಬಳಿಕವಷ್ಟೇ ಆ ಕಿಟ್ ಅನ್ನ ಸುಟ್ಟು ಹಾಕಿದ್ದಾರೆ. ಇದು ಈಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ
ಬಳ್ಳಾರಿ, ದಾವಣಗೆರೆಯಲ್ಲೂ ಇದೇ ರೀತಿ ಮಾಡಿದ್ರು. ಸೋಂಕಿತರನ್ನ ಅಂತ್ಯಕ್ರಿಯೆ ಮಾಡುವಾಗ ಮಾನವೀಯತೆ ಮರೆತು ಶವವನ್ನ ಗುಂಡಿಗೆ ಬಿಸಾಡಿದ್ರು. ಹಾಗೆ ಒಂದೇ ಗುಂಡಿಗೆ ನಾಲ್ಕು ಶವವನ್ನ ಹಾಕಿ ದುರ್ವರ್ತನೆ ತೋರಿದ್ರು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.