Monday, May 23, 2022
Powertv Logo
Homeಈ ಕ್ಷಣಕೋವಿಡ್​​ ಹೆಚ್ಚಳ : ಬನಶಂಕರಿ ದೇವಿ ಜಾತ್ರೆ ರದ್ದು

ಕೋವಿಡ್​​ ಹೆಚ್ಚಳ : ಬನಶಂಕರಿ ದೇವಿ ಜಾತ್ರೆ ರದ್ದು

ಬಾಗಲಕೋಟೆ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಟಫ್ ರೂಲ್ಸ್ ಗಳನ್ನ ಜಾರಿಗೆ ತಂದಿದೆ. ನಾಡಿನ ಶಕ್ತಿ ಪೀಠಗಳಲ್ಲಿ ಒಂದಾದ ಐತಿಹಾಸಿಕ ಬಾದಾಮಿ ಬನಶಂಕರಿ ದೇವಿ ಜಾತ್ರಾ ಮಹೋತ್ಸವರದ್ದಾಗಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವನ್ನ ಪ್ರತಿ ವರ್ಷ ಅದ್ದೂರಿಯಾಗಿ ಮಾಡಲಾಗುತ್ತಿತ್ತು. ತಿಂಗಳು ಕಾಲ ನಡೆಯುತ್ತಿದ್ದ ಜಾತ್ರೆ ರಾಜ್ಯದಲ್ಲಿ ಹೆಸರು ವಾಸಿಯಾಗಿದೆ. ಆದರೆ, ಈ ಬಾರಿ ಸೋಂಕು ಮತ್ತೆ ಹೆಚ್ಚಿರುವ ಹಿನ್ನಲೆ ಈ ಜಾತ್ರೆ ರದ್ದು ಮಾಡಲಾಗಿದೆ.

ಬಾದಾಮಿ ಬನಶಂಕರಿ ದೇವಿ ಜಾತ್ರೆ ಹೊಸ ವರ್ಷದ ಮೊದಲ ಜಾತ್ರೆಯಾಗಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದರು. ರಾಜ್ಯ ಮಾತ್ರವಲ್ಲದೆ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದರು.

- Advertisment -

Most Popular

Recent Comments