ಬೆಂಗಳೂರು: ಡಿಸೆಂಬರ್ 31 ರಂದು ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪತ್ರಿಕಾಗೋಷ್ಟಿ ನಡೆಸಿ ಹೊಸ ವರ್ಷಾಚರಣೆಗೆ ಗೈಡ್ಲೈನ್ಸ್ ಬಿಡುಗಡೆ ಮಾಡಿದರು.
5 ಕ್ಕಿಂತ ಹೆಚ್ಚು ಜನ ಓಡಾಡುವ ಹಾಗಿಲ್ಲ, ಮತ್ತು ರಸ್ತೆಯ ಮೇಲೆ ಯಾರೂ ಸೆಲೆಬ್ರೇಷನ್ ಮಾಡುವ ಹಾಗಿಲ್ಲ. ಹಾಗೂ ಅಪಾರ್ಟ್ಮೆಂಟ್ಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡಲಾಗಿದೆ ಎಂದರು.
ನ್ಯೂ ಇಯರ್ ರೂಲ್ಸ್ ಇನ್ನಷ್ಟು ಟಫ್ ಆಗಿರಲಿದೆ ಎಂದ ಕಮಲ್ ಪಂತ್ 2020 ವರ್ಷವನ್ನು ಉತ್ತಮವಾಗಿ ಬೀಳ್ಕೊಡೋಣ, ಕೊವೀಡ್ ಇರುವುದರಿಂದ ಯಾವ ಸೆಲೆಬ್ರೇಷನ್ಗೂ ಅವಕಾಶ ಇರಲ್ಲ. ರೂಪಾಂತರ ವೈರಸ್ ಹಿನ್ನೆಲೆ ಮತ್ತಷ್ಟು ಭದ್ರತೆ ಕೈಗೊಳ್ಳಲಾಗಿದೆ ಎಂದರು. ಇನ್ನೂ ವಿದೇಶದಿಂದ ಬಂದವರಿಗೆ ವಿಶೇಷ ಕ್ವಾರೈಂಟೀನ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕಮಲ್ ಪಂತ್ ತಿಳಿಸಿದ್ದಾರೆ.