ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ಇಂದು 514 ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16,767 ಕ್ಕೆ ಏರಿಕೆ ಆಗಿದೆ.
ಇನ್ನು ಸಾವಿನ ಸರಣಿ ಸಹ ಮುಂದುವರೆದಿದ್ದು, ಜಿಲ್ಲೆಯಲ್ಲಿ ಇಂದು ಕೊರೋನಾಗೆ 9 ಜನ ಬಲಿಯಾಗಿದ್ದಾರೆ. ಇದರಿಂದ ಸಾವಿನ ಜಿಲ್ಲೆಯಲ್ಲಿ 204 ಕ್ಕೆ ಏರಿಕೆಯಾಗಿದೆ.
ಒಟ್ಟು 16,767 ಸೋಂಕಿತರಲ್ಲಿ ಇಲ್ಲಿಯವರೆಗೆ 10,884 ಜನ ಗುಣಮುಖರಾಗಿದ್ದಾರೆ. 204 ಜನ ಸಾವನ್ನಪ್ಪಿದ್ದು, 5679 ಸಕ್ರಿಯ ಪ್ರಕರಣಗಳಿವೆ.