ಬೆಂಗಳೂರು : ಇಂದು ಎಲ್ಲೆಡೆ ಬಕ್ರೀದ್ ಹಬ್ಬದ ಸಡಗರ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ಹಬ್ಬ ಆಚರಿಸಲಾಗುತ್ತಿದೆ. ಪ್ರತೀ ವರ್ಷ ಸಾಮೂಹಿಕ ಪ್ರಾರ್ಥನೆ, ಅದ್ದೂರಿ ಆಚರಣೆ ಇರುತ್ತಿತ್ತು. ಈ ಬಾರಿ ಕೊರೋನಾ ಬಕ್ರೀದ್ ಆಚರಣೆಗೆ ಅಡ್ಡಿಯಾಗಿದೆ.
ಮಸೀದಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮುಸ್ಲೀಂರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಬಕ್ರೀದ್ ತ್ಯಾಗ ಮತ್ತು ಬಲಿದಾನದ ಹಬ್ಬ. ಅರೇಬಿಕ್ ಭಾಷೆಯಲ್ಲಿ ಈದ್ ಉಲ್ –ಅಧಾ ಅಂತ ಕರೆಯುತ್ತಾರೆ. ಭಾರತದಲ್ಲಿ ಬಕ್ರ – ಈದ್ ಅಥವಾ ಬಕ್ರೀದ್ ಅಂತ ಕರೆಯುತ್ತೇವೆ.
ಇಸ್ಲಾಮಿಕ್ ಕ್ಯಾಲೆಂಡರ್ನಂತೆ 12ನೇ ಹಾಗೂ ಕೊನೇ ತಿಂಗಳಾದ ಧು ಅಲ್ – ಹಿಜ್ಜಾ ಸಮಯದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತೆ. ಹಬ್ಬದ ಆಚರಣೆ ಚಂದ್ರನನ್ನು ನಿರ್ಧರಿಸಿತ್ತದೆ. ಹಾಗಾಗಿ ಒಂದೊಂದು ದೇಶಗಳಲ್ಲಿ ಆಚರಣೆಯ ದಿನಗಳಲ್ಲಿ ವ್ಯತ್ಯಾಸವಿರುತ್ತದೆ. ಅಂತೆಯೇ ಈ ವರ್ಷ ಅಂತೆಯೇ ಈ ವರ್ಷ ಸೌದಿ ಅರೇಬಿಯಾದಲ್ಲಿ ಜುಲೈ 31ರಂದು, ಅಂದ್ರೆ ನಿನ್ನೆ ಹಬ್ಬ ಆಚರಿಸಲಾಗಿದೆ. ಭಾರತದಲ್ಲಿ ಇಂದು ಹಬ್ಬ ಆಚರಿಸಲಾಗುತ್ತಿದೆ.