Thursday, August 18, 2022
Powertv Logo
Homeಸಿನಿಮಾತ್ರಿಶೂಲ..ಹುಲಿವೇಷ.. ಭೋಲೇನಾಥನಾಗಿ ಡಾ.ಶಿವಣ್ಣ​​

ತ್ರಿಶೂಲ..ಹುಲಿವೇಷ.. ಭೋಲೇನಾಥನಾಗಿ ಡಾ.ಶಿವಣ್ಣ​​

ಕಾಡಹುಲಿಯಾಗಿ ವೈರಿಗಳ ಮೇಲೆ ಎಗರೋಕೆ ಸ್ಯಾಂಡಲ್​ವುಡ್​​ ಸೆಂಚುರಿ ಸ್ಟಾರ್​ ಶಿವಣ್ಣ ರೆಡಿಯಾಗಿದ್ದಾರೆ. ಟಗರು ಕಾಂಬಿನೇಷನ್​ನಲ್ಲಿ ಬೈರಾಗಿಯ ಮ್ಯಾಜಿಕ್​ ನೋಡೋಕೆ ಫ್ಯಾನ್ಸ್​​ ಕಾಯ್ತಿದ್ದಾರೆ. ಇದೀಗ ಬೈರಾಗಿ ಪ್ರೀ ರಿಲೀಸ್​ ಇವೆಂಟ್​​ ಅದ್ಧೂರಿಯಾಗಿ ನಡೆದಿದೆ. ವೇದಿಕೆಯ ಮೇಲೆ ಡಾಲಿ, ಶಿವಣ್ಣ, ಬೈರಾಗಿ ಟೀಮ್​​ ಕಂಡು ಚಾಮರಾಜನಗರದ ಜನತೆ ಹುಚ್ಚೆದ್ದು ಕುಣಿದಿದ್ದಾರೆ.

ಹೈಲೆಟ್ಸ್​ ಪಾಯಿಂಟ್ಸ್​

  • ಡಾಲಿ ಲೋಕಲ್​ ಲಾಂಗ್ವೇಜ್​ಗೆ ಫ್ಯಾನ್ಸ್​ ಕ್ಲಿನ್​​ ಬೋಲ್ಡ್​​​..!
  • ಅಪ್ಪು ನನ್​ ರಕ್ತ ಕಣಯ್ಯ.. ಶಿವಣ್ಣ ಫ್ಯಾನ್ಸ್​​ಗೆ ವಾರ್ನಿಂಗ್​​​
  • ಕೂಸುಮರಿ ಆದಾಗಿಂದ ನೋಡಿದಿನಿ ಎಂದ ಬೈರಾಗಿ..!

ಮೊದಲ ಬಾರಿಗೆ ಶಿವಣ್ಣ ಹುಲಿ ವೇಷದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಹ್ಯಾಟ್ರಿಕ್​ ಹೀರೋ ಶಿವಣ್ಣನಿಗೆ ಇದು 123ನೇ ಸಿನಿಮಾ ಕೂಡ. ಈ ಚಿತ್ರದಲ್ಲಿ ಸ್ವೀಟ್​ 60 ಶಿವಣ್ಣ ಹಾಗೂ ಡಾಲಿ ಧನಂಜಯ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಈ ಕಾಂಬಿನೇಷನ್​​ ಕೊಡೋ ಕಿಕ್​​ ಬೇರೇನೆ ಇರುತ್ತೆ ಅಂತಾರೆ ಕ್ರೇಜಿ ಫ್ಯಾನ್ಸ್​​. ಈ ಸಿನಿಮಾದ ಪ್ರಿರಿಲೀಸ್​​ ಇವೆಂಟ್​​ ಚಾಮರಾಜನಗರದ ಡಾ.ಬಿ.ಆರ್​ ಅಂಬೇಡ್ಕರ್​ ಮೈದಾನದಲ್ಲಿ ಅದ್ದೂರಿಯಾಗಿ ನಡಿಯಿತು. ನೆರೆದಿದ್ದ ಅಭಿಮಾನಿಗಳಿಗೆ ಬೈರಾಗಿ ಟೀಮ್​ ಸಖತ್​ ಮನರಂಜನೆ ನೀಡಿದೆ.

ಹುಲಿ ವೇಷ ತೊಟ್ಟ ಕಲಾವಿದರ ಜೊತೆಗೆ ಶಿವಣ್ಣ ಮಸ್ತ್​ ಹೆಜ್ಜೆ ಹಾಕಿದ್ದಾರೆ. ಶಿವಣ್ಣನ ಹೆಜ್ಜೆಗೆ, ಗಾಂಭೀರ್ಯಕ್ಕೆ ಅಭಿಮಾನಿಗಳು ಕುಂತಲ್ಲೇ ಮೈ ಕೈ ಕುಣಿಸಿ ಸ್ಟೆಪ್ಸ್​​​ ಹಾಕ್ತಿದ್ರು. ಜುಲೈ 01ಕ್ಕೆ ಸಿನಿಮಾ ರಿಲೀಸ್​ ಆಗ್ತಿದ್ದು ಚಿತ್ರಪ್ರೇಮಿಗಳಿಗೆ ಸಖತ್​ ಕೂತೂಹಲ ಇದೆ. ಈ ನಡುವೆ ಶಿವಣ್ಣ ಚಾಮರಾಜನಗರಕ್ಕೆ ಮತ್ತೆ ಬರ್ತೀನಿ ಎಂದ್ರು. ಈ ಸಿನಿಮಾ 100% ಇಷ್ಟ ಆಗುತ್ತೆ  ಅಂದ್ರು.

ಅಭಿಮಾನಿಗಳು ಅಪ್ಪು ಹೆಸರನ್ನು ಜೋರಾಗಿ ಕೂಗ್ತಾ ಇದ್ದಂತೆ ಡಾ. ಶಿವಣ್ಣ ಫ್ಯಾನ್ಸ್​ಗೆ ವಾರ್ನಿಂಗ್​ ಕೊಟ್ರು. ಅಪ್ಪುನಾ  ಕೂಸುಮರಿ ಆದಾಗಿಮದ ನೋಡಿದಿನಿ. ಅಪ್ಪು ನನ್​ ರಕ್ತ ಕಣೋ. ಅವರನ್ನು ಎದೆಯಲ್ಲಿ ಇಟ್ಕೋ. ನನ್ನ ಜೀವ ಕಣೋ ಎಂದ್ರು. ಈ ಮಾತು ಕೇಳ್ತಿದ್ದ ಹಾಗೆ ಮತ್ತೊಮ್ಮೆ ಫ್ಯಾನ್ಸ್​ ಕೇಕೆ ಶಿಳ್ಳೆ ಹಾಕಿದ್ರು.

ಡಾಲಿ ಧನಂಜಯ ಅವರ ಲೋಕಲ್​ ಭಾಷೆಗೆ ನೆರೆದ ಆಭಿಮಾನಿಗಳೆಲ್ಲಾ ಪ್ರೀತಿಯ ಅಲೆಯಲ್ಲಿ ತೇಲಿಬಿಟ್ರು. ನಿಮ್ ಪ್ರೀತಿ ತುಂಬಾ ದೊಡ್ಡದು. ಡಾಲಿ ಅಂತಾ ಯಾವಾಗಲೂ ಕಿರುಚುತ್ತೀರಾ. ನಿಮ್​ ಅಭಿಮಾನ ದೊಡ್ಡದು. ತುಂಬಾ ಚೆನ್ನಾಗಿ ಗೆಲ್ಲಿಸಿದ್ದಿರಾ ಎಂದ್ರು.

ವಿಜಯ್​ ಮಿಲ್ಟನ್​​ ನಿರ್ದೇಶನದಲ್ಲಿ ಈ ಸಿನಿಮಾ ಸಕತ್​ ಕೂತೂಹಲ ಕೆರಳಿಸಿದೆ. ಕೃಷ್ಣ ಸಾರ್ಥಕ್​​ ನಿರ್ಮಾಣದಲ್ಲಿ ಸಿನಿಮಾ ಅದ್ಧೂರಿಯಾಗಿ  ಮೂಡಿ ಬಂದಿದೆ. ಗೀತಾ ಶಿವರಾಜ್​ ಕುಮಾರ್​​ ಕೂಡ ವೇದಿಕೆಯಲ್ಲಿ ಪಾಲ್ಗೊಂಡು  ಅಪ್ಪು ಬಗ್ಗೆ ಮಾತಾನಾಡಿದ್ರು.

ಒಟ್ಟಾರೆ ಮೂರು ವಿಭಿನ್ನ ಶೇಡ್​​ಗಳಲ್ಲಿ ಶಿವಣ್ಣ ಈ ಸಿನಿಮಾದಲ್ಲಿ ಮಿಂಚ್ತಿದ್ದಾರೆ. ದಿಯಾ ಖ್ಯಾತಿಯ ಪೃಥ್ವಿ ಅಂಬಾರ್​ ಕೂಡ ವಿಭಿನ್ನ ರೋಲ್​​ನಲ್ಲಿ ಕಾಣಿಸಿದ್ದಾರೆ. ರಿಧಮ್​ ಆಫ್​ ಶಿವಪ್ಪ  ಹಾಡಿಗೆ ಫ್ಯಾನ್ಸ್​​ ಕೂಡ ರೀಲ್ಸ್​ ಮಾಡಿ ಕಿಕ್​ಸ್ಟಾರ್ಟ್​ ಕೊಟ್ಟಿದ್ದಾರೆ. ಚಾಮರಾಜನಗರದ ಪ್ರಿ ರಿಲೀಸ್​ ಇವೆಂಟ್​ ರೆಸ್ಪಾನ್ಸ್​ ನೋಡ್ತಿದ್ರೆ ಬೈರಾಗಿ ಹವಾ ಜೋರಾಗಿರಲಿದೆ. ಎನಿವೇ ಬೈರಾಗಿಗೆ ಆಲ್​ ದಿ ಬೆಸ್ಟ್ ಹೇಳೋಣ.

ರಾಕೇಶ್​ ಅರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

- Advertisment -

Most Popular

Recent Comments