Home ಸಿನಿ ಪವರ್ ಬಾಹುಬಲಿಯನ್ನೇ ಮಕಾಡೆ ಮಲಗಿಸಿದ ಕನ್ನಡಿಗರು..!

ಬಾಹುಬಲಿಯನ್ನೇ ಮಕಾಡೆ ಮಲಗಿಸಿದ ಕನ್ನಡಿಗರು..!

ಕನ್ನಡಿಗರು ಯಾರಿಗೇನು ಕಮ್ಮಿ ಇಲ್ಲ. ಕನ್ನಡಿಗರು ಮನಸ್ಸು ಮಾಡಿದ್ರೆ ಯಾವ ರೆಕಾರ್ಡ್ ಬೇಕಾದ್ರು ಮಾಡ್ತಾರೆ, ಯಾವ ರೆಕಾರ್ಡ್ ಗಳನ್ನು ಬೇಕಾದ್ರು ಬ್ರೇಕ್ ಮಾಡ್ತಾರೆ.‌

ಈಗ ಇದು ಮತ್ತೆ ಪ್ರೂವ್ ಆಗಿದೆ. ಕನ್ನಡಿಗರು ರಾಜ್ ಮೌಳಿ ನಿರ್ದೇಶನದ ಟಾಲಿವುಡ್ ನ ಸೂಪರ್ ಹಿಟ್ ಮೂವಿ ‘ಬಾಹುಬಲಿ’ ರೆಕಾರ್ಡನ್ನು ಮುರಿದಿದ್ದಾರೆ.

ಹೌದು, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ , ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಿರೋ ‘ದಿ ವಿಲನ್’ ಬಾಹುಬಲಿ ರೆಕಾರ್ಡ್ ಬ್ರೇಕ್ ಮಾಡಿದೆ. 

 ಶಿವಮೊಗ್ಗ , ಚಿಕ್ಕಮಗಳೂರು, ಮಂಗಳೂರು, ದಕ್ಷಿಣ ಕನ್ನಡದಲ್ಲಿ ಬಾಹುಬಲಿ ಫಸ್ಟ್ ಡೇ 34 ಲಕ್ಷ  ರೂ ಕಲೆಕ್ಷನ್ ಮಾಡಿತ್ತು. ವಿಲನ್  ಬರೋಬ್ಬರಿ 48 ಲಕ್ಷ ರೂ ಗಳಿಸಿದೆ. ಒಟ್ಟಾರೆ ರಾಜ್ಯದಲ್ಲಿ ಕೇವಲ 5 ದಿನಗಳಲ್ಲಿ 50 ಕೋಟಿ ರೂ ಕಲೆಕ್ಷನ್ ಮಾಡಿರೋ ‘ದಿ ವಿಲನ್’ ಸ್ಯಾಂಡಲ್ ವುಡ್ ಹಿಸ್ಟರಿಯಲ್ಲೇ ಬಹುದೊಡ್ಡ ರೆಕಾರ್ಡ್ ಮಾಡಿದೆ.‌ ಇದರೊಂದಿಗೆ ಕರ್ನಾಟಕದಲ್ಲಿ ‘ಬಾಹುಬಲಿ’ ರೆಕಾರ್ಡ್ ಪುಡಿಗಟ್ಟುವಲ್ಲಿ ಗೆದ್ದಿದೆ.

ಕರ್ನಾಟಕ ಅಲ್ದೆ ದೆಹಲಿ, ಚೆನ್ನೈ, ಮುಂಬೈ, ಹೈದರಾಬಾದ್, ಕೊಚ್ಚಿ ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣ್ತಿದ್ದು ಮತ್ತಷ್ಟು ರೆಕಾರ್ಡ್ ಮಾಡೋದ್ರಲ್ಲಿ ನೋ ಡೌಟ್.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments