Sunday, May 29, 2022
Powertv Logo
Homeರಾಜ್ಯಬಾಗಲಕೋಟೆ ಜಿಲ್ಲೆಗೆ ಪ್ರವಾಹ ಭೀತಿ : ಪ್ರವಾಹ ಎದುರಿಸಲು ಜಿಲ್ಲಾಡಳಿತ ಸಜ್ಜು !

ಬಾಗಲಕೋಟೆ ಜಿಲ್ಲೆಗೆ ಪ್ರವಾಹ ಭೀತಿ : ಪ್ರವಾಹ ಎದುರಿಸಲು ಜಿಲ್ಲಾಡಳಿತ ಸಜ್ಜು !

ಬಾಗಲಕೋಟೆ : ಮಳೆಗಾಲ ಆರಂಭಗೊಂಡಿದ್ದು ರೋಹಿಣಿ ಮಳೆ ಆರ್ಭಟ ಮಹಾರಾಷ್ಟ್ರದಲ್ಲಿ ಹೆಚ್ಚಾದ ಹಿನ್ನೆಲೆ ಬಾಗಲಕೋಟೆ ಜಿಲ್ಲಾಡಳಿತ ಪ್ರವಾಹ ಎದುರಿಸಲು ಪೂರ್ವ ಸಿದ್ದತೆ ಮಾಡಿಕೊಳ್ತಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಕೃಷ್ಣಾ,ಘಟಪ್ರಭಾ ಮಲಪ್ರಭಾ ನದಿಗಳ ಪ್ರವಾಹಕ್ಕೆ ತುತ್ತಾದ ಸಂತ್ರಸ್ತರು ಚೇತರಿಸಿಕೊಳ್ಳುವ ಮುನ್ನ ಕೊರೋನಾ ಕರಾಳತೆಗೆ ತತ್ತರಿಸಿ ಹೋಗಿದ್ದರು.ಅದರ ಬೆನ್ನಲೆ  ಮತ್ತೆ ಪ್ರವಾಹದ ಎಚ್ಚರಿಕೆ ಗಂಟೆಗೆ ಸಂತ್ರಸ್ತರು ಬೆಚ್ಚಿಬಿದ್ದಿದ್ದಾರೆ.ಈ ಬಾರಿ ಪ್ರವಾಹ ಮುನ್ನೆಚ್ಚರಿಕೆಯಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಡಳಿತ ಸಕಲ ‌ಸಿದ್ದತೆ ಮಾಡಿಕೊಂಡಿದೆ. ಪ್ರವಾಹ ಪೀಡಿತ ತಾಲೂಕುಗಳಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದೆ. ತಹಶಿಲ್ದಾರ ಗಳು ಆರೋಗ್ಯ ಇಲಾಖೆ,ಪೊಲೀಸ್ ಇಲಾಖೆ,ಮತ್ತು ಪರಣಿತಿ ಪಡೆದ ಈಜುಗಾರರ ತಂಡ ಈಗಾಗಲೆ ರಚನೆ ಮಾಡಿಕೊಂಡಿದೆ. ಪ್ರವಾಹಕ್ಕೆ ತುತ್ತಾಗುವ ಜಮಖಂಡಿ, ಮುಧೋಳ, ಬನಹಟ್ಟಿ, ಬದಾಮಿ, ಹುನಗುಂದ್ ತಾಲೂಕುವಾರು ಅಗ್ನಿಶಾಮಕ ಇಲಾಖೆ ಸಿಬ್ಬಂದಿ, ಜೊತೆಗೆ ನುರಿತ ಬೋಟ್ ಚಾಲಕರ ಪಟ್ಟಿ ತಯಾರಿಸಲಾಗಿದೆ ನಮ್ಮಲ್ಲಿರೋ ಬೋಟ್ ಗಳ ಟ್ರಯಲ್ ಕೂಡಾ ಮಾಡಲಾಗಿದೆ.ಪ್ರತಿ ದಿನ ನದಿಗೆ ಹರಿಬಿಡಲಾಗುವ ನೀರಿನ ಒಳಹರಿವು ಪ್ರಮಾಣದ ಮೇಲೆ ನಿಗಾವಹಿಸಿ ಮುನ್ನೆಚ್ಚರಿಕೆ ನೀಡುವಂತೆ ಆಲಮಟ್ಟಿ ಡ್ಯಾಂನ ಅಭಿಯಂತರರಿಗೆ ಸೂಚಿಸಲಾಗಿದೆ. ಕಳೆದ ಬಾರಿ ಪ್ರವಾಹದಿಂದ ಪಾಠ ಕಲಿತಿರುವ ಜಿಲ್ಲಾಡಳಿತ ಈ ಬಾರಿ ಮೊದಲೇ  ಎಚ್ಚೆತ್ತುಕೊಂಡು ಸಮರ್ಥವಾಗಿ ಪ್ರವಾಹ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ.

ನಿಜಗುಣ ಮಠಪತಿ,ಪವರ್ ಟಿವಿ ಬಾಗಲಕೋಟೆ..

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments