Home P.Special ಬಳಪದಲ್ಲಿ ರಾಷ್ಟ್ರನಾಯಕರ ಚಿತ್ರಗಳು | ಕಲಾವಿದ ವಿನೋದ್ ಚಿತ್ರಕಲೆಗೆ ಭದ್ರಗಿರಿ ಶ್ರೀಗಳ ಮೆಚ್ಚುಗೆ

ಬಳಪದಲ್ಲಿ ರಾಷ್ಟ್ರನಾಯಕರ ಚಿತ್ರಗಳು | ಕಲಾವಿದ ವಿನೋದ್ ಚಿತ್ರಕಲೆಗೆ ಭದ್ರಗಿರಿ ಶ್ರೀಗಳ ಮೆಚ್ಚುಗೆ

ಬಾಗಲಕೋಟೆ : ಜಿಲ್ಲೆಯ ಬನಹಟ್ಟಿ ತಾಲ್ಲೂಕಿನ ಹಳಂಗಳಿಯ ಭದ್ರಗಿರಿ ಕ್ಷೇತ್ರದಲ್ಲಿ ಚಾಕ್ ಪೀಸ್ ಆರ್ಟಿಸ್ಟ್ ತನ್ನ ಕಲಾಕೃತಿಗಳಿಂದಲೇ ಜನಮನ ಸೆಳೆಯುತ್ತಿದ್ದಾರೆ. ಈ ಕಲಾವಿದನ ಚಿತ್ರಕಲೆಯನ್ನು ಭದ್ರಗಿರಿ ಶ್ರೀಗಳು ಕೂಡ ಮೆಚ್ಚಿದ್ದಾರೆ. 

ಭದ್ರಗಿರಿ ಕ್ಷೇತ್ರದಲ್ಲಿರುವ ವಿನೋದ್ ತನ್ನ ಕಲೆಯಿಂದ ಎಲ್ಲರ ಗಮನಸೆಳೆದಿರುವವರು. ಪೆನ್ಸಿಲ್,ಅಕ್ಕೆಕಾಳು, ಹಾಗೂ ಬಳಪದಲ್ಲಿ ಸಾವಿರಾರು ಚಿತ್ರಗಳನ್ನ ಕೆತ್ತಿದ್ದಾರೆ. ಗಾಂಧೀಜಿ, ಸುಭಾಷ್​ ಚಂದ್ರ ಬೋಸ್, ಲಾಲ್​ ಬಹುದ್ದೂರ್ ಶಾಸ್ತ್ರಿ, ಭಗತ್ ಸಿಂಗ್, ವಿವೇಕಾನಂದ, ನರೇಂದ್ರ ಮೋದಿ ಸೇರಿದಂತೆ ಅನೇಕರ ಚಿತ್ರಗಳನ್ನು ಬಿಡಿಸಿದ್ದಾರೆ. ಸುಮಾರು 2 ಸಾವಿರ ಚಿತ್ರಗಳನ್ನು ರಚಿಸಿದ್ದಾರೆ. 

ಕಡು ಬಡತನದಲ್ಲಿ ಬೆಳೆದ ಕಲಾವಿದ ವಿನೋದ್ ಅವರಿಗೆ ಬನಹಟ್ಟಿ ತಾಲ್ಲೂಕಿನ ಭದ್ರಗಿರಿ ಕ್ಷೇತ್ರದಲ್ಲಿ ಮುನಿಕುಲರತ್ನ ಶ್ರೀಗಳು ಆಶ್ರಯ ನೀಡಿದ್ದಾರೆ. ಶ್ರೀಗಳ ಮಾರ್ಗದರ್ಶನದಲ್ಲಿ ಫೈನ್ ಆರ್ಟ್ ಶಿಕ್ಷಣವನ್ನ ಮುಂದುವರೆಸಿದ್ದಾರೆ ವಿನೋದ್.

ಚಾಕ್ ಪೀಸ್ ಮತ್ತು ಪೆನ್ಸಿಲ್ ನಲ್ಲಿ ಸುಂದರ ಕಲಾಮೂರ್ತಿಗಳ ಕೆತ್ತನೆ ಮಾಡಿದ್ದಾರೆ. ಸಾಸವಿ ಕಾಳನಲ್ಲೂ ಸೂಕ್ಷ್ಮ ಕಲೆಯನ್ನು ಬಿಡಿಸಿ ಭದ್ರಗಿರಿ ಮುನಿ ಕುಲರತ್ನ ಶ್ರೀಗಳು ಮೆಚ್ಚುಗೆ ಪಾತ್ರನಾಗಿದ್ದಾರೆ. ಒಂದು ಅಕ್ಕಿ ಕಾಳನಲ್ಲಿ ನಾಲ್ಕು ಮುಖದ ಬ್ರಹ್ಮನ ಮೂರ್ತಿ ಕೆತ್ತಿದ್ದಾರೆ. ಇವರ ಕಲೆ ಎಲ್ಲೆಡೆ ಪಸರಿಸಲಿ. ಎತ್ತರೆತ್ತರಕ್ಕೆ ಬೆಳೆಯಿಲಿ ಅಂತ ಮುನಿಕುಲರತ್ನ ಶ್ರೀಗಳು ಆಶಿಸಿದ್ದಾರೆ.

-ನಿಜಗುಣ ಮಠಪತಿ

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments