ಬೆಂಗಳೂರು: ತಿಂಗಳ ಮೊದಲ ವಾರ ಬಂತೆಂದರೆ ಸಾಕು ಪ್ರತಿಯೊಬ್ಬರಿಗೂ ತಮ್ಮ ಸಂಬಳದ್ದೇ ಚಿಂತೆ. ಆದರೆ ಈ ಬಾರಿ ಲಾಕ್ಡೌನ್ ಇರುವುದರಿಂದ ಸಂಬಳ ತಮ್ಮ ಕೈ ಸೇರುತ್ತೋ ಇಲ್ವೋ ಅನ್ನೋದು ಎಲ್ಲರನ್ನೂ ಕಾಡುತ್ತಿರುವ ಚಿಂತೆಯಾಗಿದೆ. ಅದರಲ್ಲೂ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯುವ ನಿಟ್ಟಿನಲ್ಲಿ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದ ಮನೆಗೆಲಸದವರು, ವಾಹನ ಚಾಲಕರು ಹಾಗೆಯೇ ಇನ್ನಿತರ ಅಗತ್ಯ ಕೆಲಸದವರು ಏನು ಮಾಡಬೇಕೆಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಈ ಬಗ್ಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಉದ್ಯೋಗದಾತರಲ್ಲಿ ಮನವಿ ಮಾಡಿಕೊಂಡಿದ್ದು, ಯಾರಿಗೂ ವೇತನ ಕಡಿತಗೊಳಿಸಬಾರದು ಎಂದು ಕೇಳಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಾಮಾಜಿಕ ಅಂತರ ಕಾಯುವ ನಿಟ್ಟಿನಲ್ಲಿ ಕೆಲಸಕ್ಕೆ ಹಾಜರಾಗದೇ ಮನೆಯಲ್ಲೇ ಉಳಿದುಕೊಂಡಿರುವ ಮನೆಗೆಲಸದವರು, ವಾಹನ ಚಾಲಕರು,ಕಾರ್ಮಿಕರು ಹಾಗೂ ಇನ್ನಿತರ ಕೆಲಸಗಾರರ ವೇತನವನ್ನು ಕಡಿತಗೊಳಿಸಬೇಡಿ ಎಂದು ಉದ್ಯೋಗದಾತರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಬಡವರು ಹಾಗೂ ನಿರ್ಗತಿಕರಿಗೆ ಇಂತಹ ಸಂಕಷ್ಟದ ಸಮಯದಲ್ಲಿ ನೀವು ತೋರುವ ಸಹಾನುಭೂತಿಯು ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.
I request all the employers not to cut salaries of their maids, servants, drivers etc., who are not able to work due to social distancing. Your compassionate gesture will support the poor and needy to overcome this hard time.#FightBackKarnataka #CoronavirusPandemic
— B.S. Yediyurappa (@BSYBJP) April 4, 2020