ಬೆಂಗಳೂರು: ದೇಶದೆಲ್ಲೆಡೆ ಘೋಷನೆಯಾಗಿರುವ ಲಾಕ್ಡೌನ್ ಏಪ್ರಿಲ್ 3 ರವರೆಗೆ ವಿಸ್ತರಣೆಯಾಗಿದೆ. ಆದರೆ ಇದೀಗ ರಾಜ್ಯ ಸರ್ಕಾರ ಏಪ್ರಿಲ್ 20 ರ ಬಳಿಕ ಸಡಿಲಿಕೆ ಮಾಡುವ ಯೋಜನೆ ಹಾಕಿಕೊಂಡಿದ್ದು, ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಂಡಿದೆ. ಆದರೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳು ಹಸಿರು ಝೋನ್ನಲ್ಲಿರುವ ಪ್ರದೇಶಗಳಿಗೆ ಮಾತ್ರ ಒಳಗೊಂಡಿರುತ್ತದೆ. ರೆಡ್ ಝೋನ್ನಲ್ಲಿರುವ ಪ್ರದೇಶಗಳಿಗೆ ಲಾಕ್ಡೌನ್ನಲ್ಲಿ ಯಾವುದೇ ರೀತಿಯ ಸಡಿಲಿಕೆಯೂ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯ ಸರ್ಕಾರದ ಲಾಕ್ಡೌನ್ ಸಡಿಲಿಕೆಯ ಹೊಸ ನಿಯಮಗಳು ಈ ಕೆಳಗಿನಂತಿವೆ…
- ಬೆಂಗಳೂರಿನ ಐಟಿಬಿಟಿ ಕಂಪೆನಿಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ಶೇ. 33 ರಷ್ಟು ಸಿಬ್ಬಂದಿ ಬಳಸಿ ಕೆಲಸ ಮಾಡಲು ಅವಕಾಶ
- ಆಯಾ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಓಡಾಟಕ್ಕೂ ಸರ್ಕಾರ ಅವಕಾಶ. ಆದರೆ ಬೇರೆ ಜಿಲ್ಲೆಗಳಿಗೆ ದ್ವಿಚಕ್ರ ವಾಹನದಲ್ಲಿ ಹೋಗುವಂತಿಲ್ಲ
- ಕಟ್ಟಡ ನಿರ್ಮಾಣ ಕಾಮಗಾರಿಗೂ ಅವಕಾಶ
- ಸಿಮೆಂಟ್, ಕಬ್ಬಿಣ ಮಾರಾಟಕ್ಕೂ ಅನುಮತಿ
- ಎಲ್ಲರೂ ಮಾಸ್ಕ್ ಧರಿಸಿ ಓಡಾಡಲು ಸೂಚನೆ
- ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ
- ಕಂಟೈನ್ಮೆಂಟ್ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ
- ಮೇ 3ರವರೆಗೂ ಮದ್ಯ ಮಾರಾಟಕ್ಕಿಲ್ಲ ಅನುಮತಿ
- ಸದ್ಯಕ್ಕೆ ಯಾರಿಗೂ ಹೊಸ ಪಾಸ್ ವಿತರಣೆ
- ಮನೆ ಬಾಗಿಲುಗಳಿಗೆ ಅಗತ್ಯ ವಸ್ತುಗಳ ಪೂರೈಕೆ