ಇದು 20% ಕಮಿಷನ್ ಸರ್ಕಾರ: ಬಿಎಸ್​ವೈ

0
144

ಬೆಂಗಳೂರು: ದೆಹಲಿಗೆ ಕಳುಹಿಸಲು ಸಂಗ್ರಹಿಸಿದ್ದ ಹಣ ಸಿಕ್ಕಿದೆ. ಇದು 20% ಕಮಿಷನ್ ಸರ್ಕಾರ ಅಂತಾ ಸಾಬೀತಾಗಿದೆ. ಇವರಿಗೆ ಮಾನ ಮರ್ಯಾದೆ ಇದೆಯಾ? ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್​. ಯಡಿಯೂರಪ್ಪ ಅವರು ಹೇಳಿದ್ದಾರೆ. ರಾಜ್​ ಮಹಲ್ ಹೋಟೆಲ್​ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ಸಿದ್ದರಾಮಯ್ಯನವರು ಏನು ಹೇಳುತ್ತಾರೆ? ಅಧಿಕಾರಿಗಳೇ ಹಣ ಸಂಗ್ರಹಣೆ ಮಾಡುತ್ತಿದ್ದಾರೆ. ಇದಕ್ಕೆ ಕೃಷ್ಣ ಬೈರೇಗೌಡ, ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯನವರೇ ಜವಾಬ್ದಾರರು. ಹಾರಿಕೆ ಉತ್ತರ ಕೊಡದೇ ಸ್ಪಷ್ಟವಾಗಿ ಉತ್ತರಿಸಲಿ” ಅಂತ ಹೇಳಿದ್ದಾರೆ.

LEAVE A REPLY

Please enter your comment!
Please enter your name here