Sunday, May 29, 2022
Powertv Logo
Homeರಾಜ್ಯಸಿದ್ದುಗಾಗಿ ಅಂದು ಕ್ಷೇತ್ರ ತ್ಯಾಗ ಮಾಡಿದ ಚಿಮ್ಮನಕಟ್ಟಿಗೆ ಇಂದು ಪರಿಷತ್ ಎಂಎಲ್​ಸಿ ಟಿಕೆಟ್​ ಭಾಗ್ಯ?

ಸಿದ್ದುಗಾಗಿ ಅಂದು ಕ್ಷೇತ್ರ ತ್ಯಾಗ ಮಾಡಿದ ಚಿಮ್ಮನಕಟ್ಟಿಗೆ ಇಂದು ಪರಿಷತ್ ಎಂಎಲ್​ಸಿ ಟಿಕೆಟ್​ ಭಾಗ್ಯ?

ಬಾಗಲಕೋಟೆ: 2018 ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಗೆಲುವಿನ ಕ್ಷೇತ್ರ ಬಿಟ್ಟು ಕೊಟ್ಟು ಹಗಲಿರಳು ಶ್ರಮಿಸಿ ರಾಜಕೀಯ ಪುನರ್ಜನ್ಮ ನೀಡಿದ ಮಾಜಿ ಸಚಿವ ಬಾದಾಮಿ ಕ್ಷೇತ್ರದ ಮಾಜಿ ಶಾಸಕ ಬಿ.ಬಿ ಚಿಮ್ಮನಕಟ್ಟಿ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡುವಂತೆ ಕ್ಷೇತ್ರದ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.

ಚಾಮುಂಡೆಶ್ವರಿ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಖಚಿತ ಪಡೆಸಿಕೊಂಡು ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದತ್ತ  ಮುಖ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಾದಾಮಿ ಕ್ಷೇತ್ರ ತ್ಯಾಗ ಮಾಡಿ ಗೆಲ್ಲಿಸಿ ತರುವ ಜವಾಬ್ದಾರಿ ಹೊತ್ತ ಬಿ.ಬಿ ಚಿಮ್ಮನಕಟ್ಟಿ ಅವರು ಸಿದ್ದರಾಮಯ್ಯ ಅವರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಬಾದಾಮಿ ಗೆಲುವು ಸಿದ್ದರಾಮಯ್ಯ ಅವರ ಪಾಲಿಗೆ ರಾಜಕೀಯ ಪುನರ್ಜನ್ಮ ನೀಡಿದೆ. ಆ ಋಣವನ್ನು ಇಂದು ಸಿದ್ದರಾಮಯ್ಯ ಅವರು ಬಿ.ಬಿಚಿಮ್ಮನಕಟ್ಟಿ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಿ ಋಣಬಾರ ಕಡಿಮೆ ಮಾಡಿಕೊಳ್ಳುವಂತೆ ಬಾದಾಮಿ ಕ್ಷೇತ್ರದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments