Monday, August 15, 2022
Powertv Logo
Homeಸಿನಿಮಾ'ಆಯುಷ್ಮಾನ್​ ಭವ' ಜೊತೆಗೆ ಇನ್ನೂ ಮೂರು ಸಿನಿಮಾಗಳು!

‘ಆಯುಷ್ಮಾನ್​ ಭವ’ ಜೊತೆಗೆ ಇನ್ನೂ ಮೂರು ಸಿನಿಮಾಗಳು!

ಶುಕ್ರವಾರ ಬಂತಂದ್ರೆ ಸಾಕು, ಸಿನಿರಸಿಕರಿಗೆ ಹಬ್ಬ. ಸಿನಿಮಾಗಳು ಥಿಯೇಟರ್​ಗಳಿಗೆ ಲಗ್ಗೆ ಇಡೋ ದಿನ. ಹಾಗೆಯೇ ಈ ಶುಕ್ರವಾರ ಕೂಡ ಸ್ಯಾಂಡಲ್ವುಡ್ ಚಿತ್ರಪ್ರೇಮಿಗಳಿಗೆ ಸಿನಿ ರಸೌದೌತಣ ಸಿಗ್ತಿದೆ. ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್ ಅಭಿನಯದ ‘ಆಯುಷ್ಮಾನ್​ ಭವ’ ರಿಲೀಸ್ ಡೇಟ್ ಮತ್ತೆ ಮತ್ತೆ ಬದಲಾವಣೆ ಆಗಿ ಅಭಿಮಾನಿಗಳಿಗೆ ನಿರಾಶೆಯಾಗಿತ್ತು. ಈಗ ಸಿನಿಮಾ ರಿಲೀಸ್ ಆಗ್ತಿದೆ. 50ನೇ ವರ್ಷದ ಸಿನಿಜರ್ನಿಯ ಸಂಭ್ರಮದಲ್ಲಿರೋ ದ್ವಾರಕೀಶ್ ನಿರ್ಮಾಣದ ಸಿನಿಮಾಕ್ಕೆ ಪಿ ವಾಸು ಆ್ಯಕ್ಷನ್​ ಕಟ್ ಹೇಳಿದ್ದಾರೆ. ರಚಿತಾರಾಮ್​ ಶಿವಣ್ಣಗೆ ಜೋಡಿಯಾಗಿ ನಟಿಸಿದ್ದಾರೆ. ವಿಶೇಷ ಅಂದ್ರೆ ಇದು ಮ್ಯೂಸಿಕ್ ಡೈರೆಕ್ಟರ್ ಗುರುಕಿರಣ್​ ಅವರ 100ನೇ ಚಿತ್ರ. ಮತ್ತೊಂದು ವಿಶೇಷವೆಂದ್ರೆ ಶಿವಣ್ಣ ಅಭಿನಯದ `ಜನುಮದ ಜೋಡಿ’ ರಿಲೀಸ್ ಆದ ದಿನವೇ ಈ ಸಿನಿಮಾ ಕೂಡ ರಿಲೀಸ್ ಆಗ್ತಿದೆ. ಹೀಗಾಗಿ ಸಾಕಷ್ಟು ಕಾರಣಗಳಿಂದ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ.
ಇನ್ನು ಆಯುಷ್ಮಾನ್​ ಭವ ಮಾತ್ರವಲ್ಲದೆ ಮಂಜು ಸ್ವರಾಜ್ ನಿರ್ದೇಶನದ `ಮನೆ ಮಾರಾಟಕ್ಕಿದೆ, ರಿಲ್ಯಾಕ್ಸ್ ಸತ್ಯ, `ನಮ್ ಗಣಿ ಬಿ ಕಾಮ್ ಪಾಸ್ ‘ ಮತ್ತು ‘ರಾಜ್ ಪಥ ‘ ಚಿತ್ರಗಳು ರಿಲೀಸ್ ಆಗುತ್ತಿವೆ.

4 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments