Homeದೇಶ-ವಿದೇಶಹೊಸ ಪೀಠದಿಂದ ಅಯೋಧ್ಯೆ ವಿಚಾರಣೆ!

ಹೊಸ ಪೀಠದಿಂದ ಅಯೋಧ್ಯೆ ವಿಚಾರಣೆ!

ಸುಪ್ರೀಂಕೋರ್ಟ್ ಅಯೋಧ್ಯೆ ವಿವಾದದ ಕುರಿತ ವಿಚಾರಣೆಯನ್ನು ಜನವರಿ 10ಕ್ಕೆ ಮುಂದೂಡಿದ್ದು, ಆ ದಿನ ಪ್ರತ್ಯೇಕ ಸಾಂವಿಧಾನಿಕ ಪೀಠವು ಅರ್ಜಿ ವಿಚಾರಣೆ ದಿನಾಂಕವನ್ನು ನಿಗಧಿ ಮಾಡಲಿದೆ ಅಂತ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೋಯ್​ ನೇತೃತ್ವದ ಪೀಠ ಒಂದು ನಿಮಿಷದಲ್ಲಿ ವಿಚಾರಣೆ ಮುಗಿಸಿ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿತು, 2010ರಲ್ಲಿ ಅಲಹಾಬಾದ್​ ಹೈಕೋರ್ಟ್​ ವಿವಾದಿತ ಭೂಮಿಯನ್ನು ನಿರ್ಮೋಹಿ ಅಖಾಡ, ರಾಮ್​ ಲಲ್ಲಾ ಮತ್ತು ಸುನ್ನಿ ವಕ್ಫ್​​ ಮಂಡಳಿಗೆ ಹಂಚಿಕೆ ಮಾಡಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿದ್ದ ಹಿಂದೂ ಮತ್ತು ಮುಸ್ಲೀಂ ಧಾರ್ಮಿಕ ಸಂಘಟನೆಗಳು ಮೇಲ್ಮನವಿ ಸಲ್ಲಿಸಿದ್ದವು. 2018ರ ಅಕ್ಟೋಬರ್ 29ರಂದು ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​ ವಿಚಾರಣೆಯನ್ನು 2019ರ ಜನವರಿ 4ಕ್ಕೆ (ಇವತ್ತಿಗೆ) ಮುಂದೂಡಿತ್ತು.

3 COMMENTS

  1. Woah! I’m really enjoying the template/theme of this site.
    It’s simple, yet effective. A lot of times it’s very difficult to get that “perfect balance”
    between user friendliness and appearance. I must say you’ve done a excellent job with
    this. Additionally, the blog loads super quick for me on Firefox.
    Superb Blog!

LEAVE A REPLY

Please enter your comment!
Please enter your name here

- Advertisment -

Most Popular

Recent Comments