`ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ರಾಮ ಮಂದಿರ ನಿರ್ಮಾಣ’ 

0
312

ನವದೆಹಲಿ : ಬಹು ಕಾಲದ ಅಯೋಧ್ಯೆ ವಿವಾದಕ್ಕೆ ನಿನ್ನೆಯಷ್ಟೇ ಸುಪ್ರೀಂಕೋರ್ಟ್​ ತೆರೆ ಎಳೆದಿದೆ. ಸಿಜೆಐ ರಂಜನ್ ಗೊಗೊಯ್, ನ್ಯಾ ಎಸ್​​ ಎ ಬೊಬ್ಡೆ, ನ್ಯಾ ಡಿ ವೈ ಚಂದ್ರಚೂಡ್, ನ್ಯಾ ಅಶೋಕ್ ಭೂಷಣ್, ನ್ಯಾ. ಅಬ್ದುಲ್ ನಜೀರ್ ಅವರನ್ನೊಳಗೊಂಡ ಪಂಚ ಸದಸ್ಯ ಪೀಠ ಶತಮಾನದ ತೀರ್ಪನ್ನು ನೀಡಿದ್ದು, ವಿವಾದಿತ 2.77 ಎಕರೆ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ನೀಡಿದೆ. ಅಲ್ಲದೆ ಅಯೋಧ್ಯೆಯಲ್ಲೇ 5 ಎಕರೆ ಜಾಗವನ್ನು ಸುನ್ನಿ ವಕ್ಪ್​ ಬೋರ್ಡಿಗೆ ನೀಡಬೇಕೆಂದು ಆದೇಶಿಸಿದೆ. ಸುಪ್ರೀಂ ತೀರ್ಪನ್ನು ಎಲ್ಲರೂ ಸ್ವಾಗತಿಸಿದ್ದಾರೆ.

ಅಯೋಧ್ಯೆ ಮಹಾ ತೀರ್ಪು ಪ್ರಕಟ : ವಿವಾದಿತ ಜಾಗ ರಾಮ್​ಲಲ್ಲಾಗೆ- ಇಲ್ಲಿದೆ ತೀರ್ಪಿನ ಮುಖ್ಯಾಂಶಗಳು
ಅಂತೆಯೇ ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ್ ಕೊಕ್ಜೆ ಕೂಡ ತೀರ್ಪು ಸ್ವಾಗತಿಸಿರುವುದಲ್ಲದೆ ರಾಮ ಮಂದಿರ ನಿರ್ಮಾಣದ ವಿಚಾರ ಮಾತಾಡಿದ್ದಾರೆ. 1993ರಲ್ಲಿ ವಿಶ್ವ ಹಿಂದೂಪರಿಷತ್ ಸ್ಥಾಪಿಸಿದ ರಾಮ್ ಜನ್ಮಭೂಮಿ ನ್ಯಾಸ್ ಟ್ರಸ್ಟ್​ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೂಪಿಸಿರುವ ವಿನ್ಯಾಸದಂತೆಯೇ ರಾಮ ಮಂದಿರ ನಿರ್ಮಾಣವಾಗಲಿದೆ. ಸುಪ್ರೀಂಕೋರ್ಟ್ ಆದೇಶದಂತೆ ಸರ್ಕಾರ ಟ್ರಸ್ಟ್ ಸ್ಥಾಪನೆ ಮಾಡಲಿದ್ದು, 2024ರೊಳಗೆ ಮಂದಿರ ನಿರ್ಮಾಣವಾಗಲಿದ್ದು, ಶ್ರೀರಾಮನ ದರ್ಶನ ಸಿಗಲಿದೆ ಎಂದು ತಿಳಿಸಿದ್ದಾರೆ.
ದೇಗುಲ ನಿರ್ಮಾಣಕ್ಕೆ ತಗಲುವ ವೆಚ್ಚ ಎಷ್ಟು? : ದೇಶಾದ್ಯಂತ 100ಕ್ಕೂ ಹೆಚ್ಚು ದೇವಾಲಯಗಳ ವಿನ್ಯಾಸ ಮಾಡಿರೋ ಚಂದ್ರಕಾಂತ್​​ರವರಿಗೆ ವಿಹೆಚ್​ಪಿ ಮೂರು ದಶಕಗಳ ಹಿಂದೆಯೇ ಮಂದಿರ ವಿನ್ಯಾಸದ ಹೊಣೆ ನೀಡಿತ್ತು. ನಗರ ಶೈಲಿಯಲ್ಲಿ ರಾಮಮಂದಿರ ನಿರ್ಮಾಣವಾಗಲಿದ್ದು, ಒಟ್ಟಯ 2 ಮಹಡಿ ಹೊಂದಿರಲಿದೆ. ಮೊದಲನೆ ಮಹಡಿಯಲ್ಲಿ ರಾಮ್​ಲಲ್ಲಾ ಪ್ರತಿಷ್ಠಾಪನೆ, ಎರಡನೇ ಮಹಡಿಯಲ್ಲಿ ರಾಮ್​ ದರ್ಬಾರ್ ಹಾಗೂ ಅದರ ಮೇಲೆ ಶಿಖರವಿರಲಿದೆ. ಮಂದಿರ 2 ದೊಡ್ಡ ಗುಮ್ಮಟ ಹಾಗೂ ಒಂದು ಶಿಖರವನ್ನು ಒಳಗೊಂಡಿರಲಿದೆ.

ಶತಮಾನದ ತೀರ್ಪು ನೀಡಿದ ಸುಪ್ರೀಂ ನ್ಯಾಯಮೂರ್ತಿಗಳು ಇವರೇ…

ವಾಸ್ತ್ರ ಶಾಸ್ತ್ರ ಹಾಗೂ ಶಿವ ಶಾಸ್ತ್ರಗಳ ಪ್ರಕಾರ ಸದ್ಯ 4.5 ಎಕರೆ ಪ್ರದೇಶಕ್ಕೆ ವಿನ್ಯಾಸ ರೂಪಿಸಲಾಗಿದೆ. ನಿರ್ಮಾಣಕ್ಕೆ ಮರಳಿನ ಕಲ್ಲುಗಳನ್ನು ಬಳಸಲಿದ್ದು, ರಜಸ್ಥಾನದ ಭರತ್​ಪುರದಿಂದ ತರಿಸಲಾಗುತ್ತೆ. ಕಂಬಳ ಮೇಲೆ ಹಿಂದೂ ದೇವತೆಗಳು ವಿಗ್ರಹ, ಹೂ -ಎಲೆಗಳ ವಿನ್ಯಾಸವಿರಲಿದ್ದು, ದೇಗುಲ ನಿರ್ಮಾಣಕ್ಕೆ ಮಾತ್ರವೇ 50 ಕೋಟಿ ರೂ ತಗಲುತ್ತದೆ ಎಂದು ಅಂದಾಹಿಸಲಾಗಿದ್ದು, ನಿರ್ಮಾಣಕ್ಕೆ 4 ವರ್ಷವಂತೂ ಬೇಕಿದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಮಂದಿರ ನಿರ್ಮಾಣವಾಗಲಿದೆ. ವಿಹೆಚ್​ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ್ ಕೊಕ್ಜೆ ಕೂಡ 2024ರೊಳಗೆ ರಾಮನ ದರ್ಶನ ಸಿಗಲಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here