Home P.Special 92ರ ಇಳಿವಯಸ್ಸಲ್ಲೂ ರಾಮ ಜನ್ಮಭೂಮಿ ಪರ, ನಿಂತುಕೊಂಡೇ ವಾದ ಮಂಡಿಸಿದ್ರು!

92ರ ಇಳಿವಯಸ್ಸಲ್ಲೂ ರಾಮ ಜನ್ಮಭೂಮಿ ಪರ, ನಿಂತುಕೊಂಡೇ ವಾದ ಮಂಡಿಸಿದ್ರು!

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ ಎಸ್​​ ಎ ಬೊಬ್ಡೆ, ನ್ಯಾ ಡಿ ವೈ ಚಂದ್ರಚೂಡ್, ನ್ಯಾ ಅಶೋಕ್ ಭೂಷಣ್, ನ್ಯಾ. ಅಬ್ದುಲ್ ನಜೀರ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್​ನ ಪಂಚ ಸದಸ್ಯ ಪೀಠ ನಿನ್ನೆಯಷ್ಟೇ ಅಯೋಧ್ಯಾ ಮಹಾತೀರ್ಪನ್ನು ನೀಡಿದೆ. ವಿವಾದಿತ 2.77 ಎಕರೆ ಜಾಗ ರಾಮಮಂದಿರಕ್ಕೆ ಮೀಸಲು ಎಂದು ಆದೇಶಿಸಿದೆ.
ಆದರೆ, ನಿಮ್ಗೆ ಗೊತ್ತಾ? ಈ ಜಾಗದಲ್ಲೇ ರಾಮಮಂದಿರ ಇತ್ತು ಅಂತ ವಾದ ಮಂಡಿಸಿದ ವಕೀಲರಿಗೆ 92 ವರ್ಷ ವಯಸ್ಸು! ಅಷ್ಟೇ ಅಲ್ಲ ಈ ಇಳಿ ವಯಸ್ಸಲ್ಲೂ ಅವರು ನಿಂತು ಕೊಂಡೇ ವಾದ ಮಂಡಿಸಿದ್ದರು!
ಹೌದು ರಾಮ್​ಲಲ್ಲಾ ಪರ 40 ದಿನಗಳ ಕಾಲದ ಸುಧೀರ್ಘ ವಾದ ಮಂಡಿಸಿದ ವಕೀಲರ ಹೆಸ್ರು ಕೆ. ಪರಸರನ್ ಅಂತ. ಇವರಿಗೆ 92 ವರ್ಷ ವಯಸ್ಸು. ನೀವು ಕುಳಿತುಕೊಂಡೇ ವಾದ ಮಂಡಿಸಿ ಅಂತ ನ್ಯಾಯಮೂರ್ತಿಗಳು ಹೇಳಿದರೂ, ನಿಂತು ಕೊಂಡು ವಾದ ಮಂಡಿಸೋದು ನಮ್ಮ ಸಂಸ್ಕೃತಿ ಅಂತ ಪರಸರನ್ ನಿಂತೇ ವಾದ ಮಂಡಿಸಿದ್ದರಂತೆ.
ಇನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ ಪರಸರನ್ ತಮಿಳುನಾಡಿನ ಅಡ್ವೊಕೇಟ್ ಜನರಲ್ ಆಗಿದ್ದರು. 1980ರಲ್ಲಿ ಭಾರತದ ಸಾಲಿಸಿಟರ್ ಜನರಲ್ ಆಗಿ ನೇಮಕವಾದರು. 193-1989ರ ಅವಧಿಯಲ್ಲಿ ಭಾರತದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.
ಅಲ್ಲದೆ ಶಬರಿಮಲೆ ವಿಚಾರದಲ್ಲಿ ಮಹಿಳೆಯರಿಗೆ ದೇವಸ್ಥಾನಕ್ಕೆ ಪ್ರವೇಶದ ವಿರುದ್ಧ ವಾದ ಮಂಡಿಸಿದ್ದರು. 2012 -2018ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರೂ ಆಗಿದ್ದರು.

LEAVE A REPLY

Please enter your comment!
Please enter your name here

- Advertisment -

Most Popular

ದುಡ್ಡು  ಕೊಟ್ರೆ ಮಾತ್ರ ವಾರ್ಡ್​ ಬಾಯ್​​​ಗಳ ಕೆಲಸ..!

ಬೆಂಗಳೂರು : ದುಡ್ಡು ದುಡ್ಡು ದುಡ್ಡು ..  ಇಲ್ಲಿ ವಾರ್ಡ್​ ಬಾಯ್​ಗಳು ನೆಟ್ಟಗೆ ಕೆಲಸ ಮಾಡ್ಬೇಕು ಅಂದ್ರೆ ದುಡ್ಡು ಬಿಚ್ಚಲೇ ಬೇಕು! ಅಲ್ಪಸ್ವಲ್ಪ ದುಡ್ಡು ಕೊಟ್ರೆ ಧಿಮಾಕಿಂದ, ಸೊಕ್ಕಿನಿಂದ ಕೆಲಸ ಮಾಡ್ತಾರೆ! ಸ್ವಲ್ಪ...

ಕೊವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಢ | 8 ಮಂದಿ ಸಜೀವ ದಹನ

ಅಹಮದಾಬಾದ್ : ನವರಂಗಪುರದ ಶ್ರೇಯ್ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಅಗ್ನಿ ಅವಘಢ ಸಂಭಂವಿಸಿದ್ದು, 8  ಮಂದಿ ರೋಗಿಗಳು ಸಜೀವ ದಹನಗೊಂಡಿದ್ದಾರೆ ವರದಿಯಾಗಿದೆ. ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿನ ಇಂಟೆನ್ಸಿವ್ ಕೇರ್ ಯುನಿಟ್ ( ಐಸಿಯು)...

ಬನ್ನೇರುಘಟ್ಟದಲ್ಲಿ ಸಫಾರಿ ಹುಲಿಯೊಂದಿಗೆ ಕಾಡಿನ ಹುಲಿ ಕಾದಾಟ..!

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಹುಲಿ ಮತ್ತು ಕಾಡಿನ ಹುಲಿ ಕಾದಾಡಿಕೊಂಡಿವೆ. ಸಫಾರಿ ಹುಲಿ ಮತ್ತು ಕಾಡಿನ ಹುಲಿ ಮುಖಾಮುಖಿಯಾಗಿದ್ದು, ಕಾದಾಟಕ್ಕಿಳಿದಿವೆ.  ಅವೆರಡರ ನಡುವೆ ತಂತಿ ಬೇಲಿ ಇದ್ದರೂ ಘರ್ಜಿಸುತ್ತಾ ಜಗಳಕ್ಕಿಳಿದಿವೆ. ಹುಲಿಗಳ ಈ ಕಾದಾಟದ...

ಮಲೆನಾಡಿನಲ್ಲಿ ವರ್ಷಧಾರೆ ವೈಭವ ; ಕಣ್ಮನ ಸೆಳೆಯುತ್ತಿದೆ ಜೋಗ ಜಲಪಾತ

 ಶಿವಮೊಗ್ಗ : ರಾಜ್ಯಕ್ಕೆ ಬೆಳಕು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಆಶ್ಲೇಷ ಮಳೆಯ ಅಬ್ಬರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಜಗದ್ವಿಖ್ಯಾತ ಜೋಗ ಜಲಪಾತ, ಮೈದುಂಬುತ್ತಿದ್ದು, ಮಂಜು ಮುಸುಕಿನ ಚೆಲ್ಲಾಟದ...

Recent Comments