Home ಸಿನಿ ಪವರ್ 'ಅವನೇ ಶ್ರೀಮನ್ನಾರಾಯಣ' ಟ್ರೈಲರ್ ರಿಲೀಸ್! ಹೇಗಿದೆ ಗೊತ್ತಾ ಸಿಂಪಲ್ ಸ್ಟಾರ್ ಹೊಸ ಅವತಾರ?

‘ಅವನೇ ಶ್ರೀಮನ್ನಾರಾಯಣ’ ಟ್ರೈಲರ್ ರಿಲೀಸ್! ಹೇಗಿದೆ ಗೊತ್ತಾ ಸಿಂಪಲ್ ಸ್ಟಾರ್ ಹೊಸ ಅವತಾರ?

 ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹೊಸ ಅವತಾರ ಕಣ್ತುಂಬಿಕೊಳ್ಳಲು ಕಾಯ್ತಿರೋ ಅಭಿಮಾನಿಗಳಿಗೆ ‘ಶ್ರೀಮನ್ನಾರಾಯಣ’ನ ಸಣ್ಣ ಝಲಕ್ ದರ್ಶನವಾಗಿದೆ. ನಮ್​ ‘ನಾರಾಯಣ’ ಹೆಂಗಿರಬಹುದು ಅನ್ನೋ ಕುತೂಹಲವನ್ನು ಬಿಡುಗಡೆಯಾಗಿರೋ ಟ್ರೈಲರ್ ತಣಿಸಿದೆ..ಜೊತೆಗೆ ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ಸಿಕ್ಕಾಪಟ್ಟೆ ಹೆಚ್ಚಿಸಿದೆ.

ಎಲ್ಲೋದ್ರಪ್ಪಾ ಸಿಂಪಲ್ ಸ್ಟಾರ್?  ಹೇಗಿದ್ದಾರಪ್ಪಾ ನಮ್ಮ ‘ಕಿರಿಕ್’ ಸ್ಟಾರ್? ಮೂರ್ ವರ್ಷ ಆಗ್ತ ಬಂತು ಒಂದೇ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿಲ್ವಲ್ರೀ ಅಂತ ಬೇಜಾರಲ್ಲಿದ್ದ ಅಭಿಮಾನಿಗಳು ಒಂದಷ್ಟು ಸಮಯದಿಂದ ‘ಶ್ರೀಮನ್ನಾರಾಯಣ’ನ ಜಪ ಮಾಡ್ತಿದ್ದಾರೆ. ಆದ್ರೆ ಇನ್ನೂ ಕೂಡ ದರ್ಶನ ಭಾಗ್ಯ ಸಿಕ್ಕಿಲ್ಲ. ಆದ್ರೆ, ಆಗಾಗ ಸಿಹಿ ಪ್ರಸಾದ ಅರ್ಥಾತ್ ಗಿಫ್ಟ್ `ಶ್ರೀಮನ್ನಾರಾಯಣ’ನ ಕಡೆಯಿಂದ ಸಿಗುತ್ತಲೇ ಬಂದಿದೆ. ಈಗ ಮತ್ತೊಂದು ಮಹಾ ಉಡುಗೊರೆಯನ್ನು ‘ಶ್ರೀಮನ್ನಾರಾಯಣ’ ಅಭಿಮಾನಿಗಳಿಗೆ ಕರುಣಿಸಿದ್ದಾನೆ….ಆ ಗಿಫ್ಟ್ ಏನು ಅಂದ್ರಾ..? ಅದುವೇ ಸಿನಿಮಾ ಟ್ರೈಲರ್.

2010ರಲ್ಲಿ ಸ್ಯಾಂಡಲ್ವುಡ್ ಜರ್ನಿ ಆರಂಭಿಸಿದ ರಕ್ಷಿತ್ ಶೆಟ್ಟಿ ಕನಿಷ್ಠ ಒಂದು – ಒಂದುವರೆ ವರ್ಷಕ್ಕೆ ಒಂದಾದ್ರು ಸಿನಿಮಾ ಮೂಲಕ ಕಾಣಿಸಿಕೊಳ್ತಿದ್ರು. ಆದ್ರೆ,  2016ರ ಬಳಿಕ ಕಾಣೆಯಾಗಿ ಬಿಟ್ರು..! ಮೂರು ವರ್ಷವನ್ನು ಒಂದೇ ಒಂದು ಸಿನಿಮಾಕ್ಕೆ ಮೀಸಲಿಟ್ರು.. ಆ ಸಿನಿಮಾವೇ ರಿಲೀಸ್​ಗೆ ರೆಡಿಯಾಗಿರೋ ‘ಅವನೇ ಶ್ರೀಮನ್ನಾರಾಯಣ’.

ಅರವಿಂದ್ ಕೌಶಿಕ್ ನಿರ್ದೇಶನದ ‘ನಮ್ ಏರಿಯಾಲ್ ಒಂದ್ ದಿನ ‘ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದವ್ರು ರಕ್ಕಿ. ಆ ಬಳಿಕ ಅದೇ ಅರವಿಂದ್ ಕೌಶಿಕ್ ಆ್ಯಕ್ಷನ್ ಕಟ್ ಹೇಳಿದ ಮತ್ತೊಂದು ಮೂವಿ ತುಘಲಕ್ ಮೂಲಕ ಪೂರ್ಣಪ್ರಮಾಣದ ನಾಯಕನಟನಾಗಿ ಮಿಂಚಿದ್ರು. ಬಳಿಕ ಸಿಂಪಲ್​​ ಸುನಿ ನಿರ್ದೇಶನದ ‘ಸಿಂಪಲ್​​ ಆಗ್ ಒಂದ್ ಲವ್ ಸ್ಟೋರಿ’ ಮೂವಿ ಮೂಲಕ ಮನೆ ಮಾತಾದ್ರು.

ಆಮೇಲೆ ನಾನೇಕೆ ಮೂವಿ ಡೈರೆಕ್ಷನ್ ಮಾಡ್ಬಾರ್ದು ಅಂತ ಯೋಚ್ನೆ ಮಾಡಿದ ರಕ್ಷಿತ್ ಜೈ ಡೈರೆಕ್ಷನ್ ಕ್ಯಾಪ್ ತೊಟ್ಟೇ ಬಿಟ್ರು. ಆಗ ಬಂದಿದ್ದೇ ‘ಉಳಿದವರು ಕಂಡಂತೆ’!   ಈ ಉಳಿದವರು ಕಂಡಂತೆ ಮೂವಿ ಮೂಲಕ ರಕ್ಷಿತ್ ಶೆಟ್ಟಿ ತಾನೊಬ್ಬ ನಟ ಮಾತ್ರವಲ್ಲ.. ಅದ್ಭುತ ನಿರ್ದೇಶಕನಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಬಲ್ಲೆ ಅನ್ನೋ ಭರವಸೆ ಮೂಡಿಸಿದ್ರು. ಆದರೆ, ಆ ಬಳಿಕ ನಟನೆಯಲ್ಲಿ ಬ್ಯುಸಿಯಾದ ರಕ್ಕಿ ಸಿನಿಮಾ ನಿರ್ದೇಶನ ಮಾಡಿಲ್ಲ.

ಒಂದಂರ ಹಿಂದೆ ಒಂದರಂತೆ ಸಿನಿಮಾಗಳಲ್ಲಿ ನಟನಾಗಿ ಮಿಂಚಲಾರಂಭಿಸಿದ್ರು. ವಾಸ್ತುಪ್ರಕಾರ, ರಿಕ್ಕಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾಗಳ ಮೂಲಕ ಕನ್ನಡಿಗರಿಗೆ ಬಹಳ ಆಪ್ತರಾದ ರಕ್ಷಿತ್ ಶೆಟ್ಟಿ 2016ರ ಕೊನೆಯಲ್ಲಿ ತೆರೆಕಂಡ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಸ್ಯಾಂಡಲ್​ವುಡ್ ಸ್ಟಾರ್​ ನಟರ ಪಂಕ್ತಿಯಲ್ಲಿ ಅಗ್ರ ಸಾಲಿಗೆ ಸೇರಿದ್ರು.

‘ಕಿರಿಕ್ ಪಾರ್ಟಿ’ ಬಳಿಕ ಆ ಸಿನಿಮಾ ಡೈರೆಕ್ಟರ್ ರಿಷಭ್ ಶೆಟ್ಟಿ `ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ರು. ಜೊತೆಗೆ ಆ ಸಿನಿಮಾದಲ್ಲಿ ಆ್ಯಕ್ಟ್ ಕೂಡ ಮಾಡಿದ್ರು. ಬೆಲ್ ಬಾಟಂ ಸಿನಿಮಾದಲ್ಲಿ ನಾಯ ನಟನಾಗಿ ಮಿಂಚಿದ್ರು. ಇದೇ ಕಿರಿಕ್ ಪಾರ್ಟಿ ಮೂಲಕ ಸಿನಿರಂಗ ಪ್ರವೇಶಿಸಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸ್ಯಾಂಡಲ್ವುಡ್ ಮಾತ್ರವಲ್ಲದೆ ಪರಭಾಷೆಗಳಲ್ಲೂ ಬಹ ಬೇಡಿಕೆ ಹೊಂದಿರೋ ನಟಿಯಾಗಿದ್ದಾರೆ. ಇನ್ನೊಬ್ಬ ನಾಯಕಿ ಸಂಯುಕ್ತಕೂಡ ಸಿನಿಮಾ , ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ಮಟ್ಟಿಗೆ ಕಿರಿಕ್ ಪಾರ್ಟಿ ಇಡೀ ಟೀಮ್​ ಗೆ ಯಶಸ್ಸು ತಂದುಕೊಟ್ಟಿತ್ತು. ಆದರೆ, ರಕ್ಷಿತ್ ಶೆಟ್ಟಿ ಮಾತ್ರ ಆ ಬಳಿಕ ಯಾವ್ದೇ ಸಿನಿಮಾದಲ್ಲಿ ಕಾಣಿಸಿಕೊಂಡಿರ್ಲಿಲ್ಲ. ಇದು ಅಭಿಮಾನಿಗಳಿಗೆ ಬೇಸರ ತಂದಿತ್ತು.

ಹಾಗೆಂದ ಮಾತ್ರಕ್ಕೆ ರಕ್ಷಿತ್ ಖಾಲಿ ಕೂತಿರ್ಲಿಲ್ಲ. ಅಭಿಮಾನಿಗಳ ನಿರೀಕ್ಷೆಗೂ ಮೀರಿದ ಸಿನಿಮಾವೊಂದನ್ನು ಕೊಡ್ಬೇಕು ಅಂತ ಆ ನಿಟ್ಟಿನಲ್ಲಿ ಬ್ಯುಸಿ ಇದ್ರು. ಆ ಪ್ರಯತ್ನವೀಗ ‘ಅವನೇ ಶ್ರೀಮನ್ನಾರಾಯಣ’ನ ರೂಪದಲ್ಲಿ ಅಭಿಮಾನಿಗಳ ಮುಂದೆ ಬರ್ತಿದೆ. ಈಗಾಗಲೇ ಪೋಸ್ಟರ್, ಟೀಸರ್​ಗಳಿಂದ ಸಖತ್ ಸೌಂಡು ಮಾಡಿರುವ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳಲ್ಲಿ  ಟ್ರೈಲರ್ ರಿಲೀಸ್ ಆಗಿದ್ದು… ‘ಶ್ರೀಮನ್ನಾರಾಯಣ’ ಪವರ್ ಫುಲ್ ಆಗಿ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಪಂಚಭಾಷೆಗಳಲ್ಲೂ ಆಯಾ ನೇಟಿವಿಟಿಗೆ ತಕ್ಕಂತೆ ಸಿನಿಮಾ ಬರಲಿದೆ ಅನ್ನೋದನ್ನು ಟ್ರೈಲರ್ ಸಾರುತ್ತಿದೆ. 

ಸಚಿನ್ ರವಿ `ಶ್ರೀಮನ್ನಾರಾಯಣ’ನಿಗೆ ಆ್ಯಕ್ಷನ್ ಕಟ್ ಹೇಳಿದ್ದು, ಹೆಚ್​ ಕೆ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ. ಡಿಸೆಂಬರ್ 27ಕ್ಕೆ ಪಂಚ ಭಾಷೆಗಳಲ್ಲಿ ‘ಶ್ರೀಮನ್ನಾರಾಯಣ’ನ ದರ್ಶನವಾಗಲಿದ್ದು,4 ನಿಮಿಷ 13 ಸೆಕೆಂಡ್​ ಇರೋ ಟ್ರೈಲರ್ ನೋಡಿದವರು  ಇನ್ನೊಂದು ತಿಂಗಳು ಯಾವಗಪ್ಪಾ ಆಗುತ್ತಂತ ಕಾಯ್ತಿದ್ದು, ‘ಶ್ರೀಮನ್ನಾರಯಣ’ ಗೆ ನಮ್ ಕಡೆಯಿಂದಲೂ ಪ್ರೀತಿಯ ಸ್ವಾಗತ.

LEAVE A REPLY

Please enter your comment!
Please enter your name here

- Advertisment -

Most Popular

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ...

Recent Comments