Tuesday, September 27, 2022
Powertv Logo
Homeಸಿನಿಮಾಹೇಗಿದೆ ಗೊತ್ತಾ 'ಅವನೇ ಶ್ರೀಮನ್ನಾರಾಯಣ'?

ಹೇಗಿದೆ ಗೊತ್ತಾ ‘ಅವನೇ ಶ್ರೀಮನ್ನಾರಾಯಣ’?

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೂರು ವರ್ಷದ ಬಳಿಕ ಬೆಳ್ಳಿ ಪರದೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. 2016ರಲ್ಲಿ ಕಿರಿಕ್ ಪಾರ್ಟಿ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟ ರಿಕ್ಕಿ ಆಮೇಲೆ ಒಂದೇ ಒಂದು ಸಿನಿಮಾದಲ್ಲೂ ಕಾಣಿಸಿಕೊಂಡಿರ್ಲಿಲ್ಲ. ಇದೀಗ ಶ್ರೀಮನ್ನಾರಾಯಣನ ಅವತಾರದಲ್ಲಿ ಬಂದಿದ್ದಾರೆ.
ಮೂರು ವರ್ಷ ಒಂದೇ ಒಂದು ಸಿನಿಮಾಕ್ಕಾಗಿ ರಕ್ಷಿತ್ ಶೆಟ್ಟಿ ಶ್ರಮಿಸಿದ್ದಾರೆಂದ್ರೆ ಲೆಕ್ಕಹಾಕಿ ಸಿನಿಮಾ ಯಾವ ಮಟ್ಟಿಗಿರ್ಬೇಡ ಅಂತ?! ಹೀಗಾಗಿಯೇ ‘ಅವನೇ ಶ್ರೀಮನ್ನಾರಾಯಣ’ನ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು. ಆ ನಿರೀಕ್ಷೆಯನ್ನು ಇಡೀ ಚಿತ್ರತಂಡ ಉಳಿಸಿಕೊಂಡಿದೆ. ರಕ್ಷಿತ್ ಶೆಟ್ಟಿಯ ನಟನೆ, ಮ್ಯಾನರಿಸಿಂಗೆ ಫ್ಯಾನ್ಸ್ ಮಾತ್ರವಲ್ಲದೆ ಚಿತ್ರರಸಿಕರೆಲ್ಲರೂ ಫಿದಾ ಆಗಿದ್ದಾರೆ. ಸಿನಿ ವಿಮರ್ಶಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಸಿನಿಮಾ ಅಂದ್ರೆನೇ ಹಾಗೇ ಅದು ಕಾಲ್ಪನಿಕ ಜಗತ್ತಿನ ಸುಂದರ ಅನಾವರಣ. ಹಾಗಾಗಿ `ಶ್ರೀಮನ್ನಾರಾಯಣ’ನನ್ನು ಕೂಡ ಅದೇ ಕಾನ್ಸೆಪ್ಟ್​​ನಲ್ಲಿ ನೋಡಿದ್ರೆ ಖಂಡಿತಾ ಇಷ್ಟವಾಗುತ್ತಾನೆ…. ಪಕ್ಕಾ ಪೈಸಾ ವಸೂಲಿ ಸಿನಿಮಾ ಅನ್ನೋದ್ರಲ್ಲಿ ನೋ ಡೌಟ್.
ಪೊಲೀಸ್ ಇನ್ಸ್​​ಪೆಕ್ಟರ್, ಕಾನ್ಸ್ಟೇಬಲ್ , ಟೀಮೊಂದರ ಲೀಡರ್ ಹಾಗೂ ಡ್ರಾಮಾ ಕಂಪನಿಯವರು ನಿಧಿಗಾಗಿ ಹಿಂದೆ ಬೀಳ್ತಾರೆ. ಅವರೆಲ್ಲಾ ಯಾವ್ಯಾವ ರೀತಿ ಪ್ರಯತ್ನ ಪಡ್ತಾರೆ? ಯಾರಿಗೆ ನಿಧಿ ಸಿಗುತ್ತೆ ಅನ್ನೋದೇ ಸಿನಿ ಹೂರಣ. ಅಮರಾವತಿ ಅನ್ನೋ ಕಾಲ್ಪನಿಕ ಊರೊಂದರಲ್ಲಿ ಹೀಗೆ ನಿಧಿ ಹಿಂದೆ ಬೀಳೋ ಕಳ್ಳರು ಹಾಗೂ ಪೊಲೀಸರ ನಡುವಿನ ಕಥೆಯೇ ‘ಅವನೇ ಶ್ರೀಮನ್ನಾರಾಯಣ’.
ಸಾಹಸ, ಹಾಸ್ಯ, ಕಾಮಿಡಿ ಎಲ್ಲವೂ ಇಷ್ಟವಾಗುತ್ತೆ. ಚಿತ್ರದ ಮೇಕಿಂಗ್ ಬಗ್ಗೆ ಎರಡು ಮಾತಿಲ್ಲ. ಡೈರೆಕ್ಟರ್ ಸಚಿನ್ ರವಿ ಫಸ್ಟ್ ಮೂವಿಯಲ್ಲೇ ಸೆಂಚುರಿ ಬಾರಿಸೋದ್ರಲ್ಲಿ ಅನುಮಾನ ಬೇಡ. ಸಂಗೀತ ಕೂಡ ಸೂಪರ್! ನಾಯಕಿ ಶಾನ್ವಿ ಶ್ರೀವತ್ಸಾವ್, ಅಚ್ಯುತ್​ ಕುಮಾರ್, ಬಾಲಾಜಿ ಮನೋಹರ್, ಗೋಪಾಲ್​​ ದೇಶಪಾಂಡೆ, ಪ್ರಮೋದ್ ಶೆಟ್ಟಿ ಸೇರಿದಂತೆ ಎಲ್ಲಾ ಕಲಾವಿದರು ತಮ್ಮ ಅದ್ಭುತ ನಟನೆಯಿಂದ ಗಮನಸೆಳೆದಿದ್ದಾರೆ. ಒಂದೇ ಮಾತಲ್ಲಿ ಹೇಳ್ಬೇಕಂದ್ರೆ 3 ಗಂಟೆ 6 ನಿಮಿಷ ನೀವು ‘ಅವನೇ ಶ್ರೀಮನ್ನಾರಾಯಣ’ನ ಮನರಂಜನೆಯನ್ನು ಖುಷಿ ಖುಷಿಯಾಗಿ ಸವಿಯುತ್ತೀರಿ. ಥಿಯೇಟಿರಿಂದ ಬಂದಮೇಲೂ ಸ್ವಲ್ಪ ಹೊತ್ತು ‘ಶ್ರೀಮನ್ನಾರಾಯಣ’ನ ಗುಂಗಲ್ಲಿ ಇರ್ತೀರಿ. ರೇಟಿಂಗ್ ಕೊಡೋದಾದ್ರೆ 5 ಕ್ಕೆ 4 ಪಾಯಿಂಟ್ ಅಂತ ಕಣ್ಮಚ್ಕೊಂಡ್ ಕೊಡ್ಬಹುದು.

10 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments