ಡಿಸೆಂಬರ್​ನಲ್ಲಿ ಮತ್ತೆ ‘ಕಿರಿಕ್’ ಮಾಡಲು ಬರ್ತಿದ್ದಾನೆ ‘ಶ್ರೀಮನ್ನಾರಾಯಣ’..!

0
138

ಅದು 2016 ಡಿಸೆಂಬರ್ 30 ‘ಕಿರಿಕ್ ಪಾರ್ಟಿ’ ಸಿನಿಮಾ ರಿಲೀಸ್ ಆಗಿದ್ದ ದಿನ. ರಿಷಭ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದ ಆ ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದರು. ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅವರ ಚೊಚ್ಚಲ ಸಿನಿಮಾ ಕೂಡ ಇದೇ ಕಿರಿಕ್ ಪಾರ್ಟಿ. ಇದೇ ಸಿನಿಮಾದಿಂದ ಸಂಯುಕ್ತಾ ಹೆಗ್ಡೆ ಕೂಡ ಸ್ಯಾಂಡಲ್ವುಡ್ ಜರ್ನಿ ಆರಂಭಿಸಿದ್ರು.
ಈ ಸೂಪರ್ ಹಿಟ್ ಸಿನಿಮಾ ಬಂದು 3 ವರ್ಷ ಕಳೆದಿದೆ. ನಾಯಕಿ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಮಾತ್ರವಲ್ಲದೆ ಪರ ಭಾಷೆಗಳಲ್ಲೂ ನಟಿಸಿ ಸೈ ಅನಿಸಿಕೊಂಡಿದ್ದಾರೆ. ಸಂಯುಕ್ತಾ ಹೆಗ್ಡೆ ಕೂಡ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ, ‘ಕಿರಿಕ್’ ಹೀರೋ ರಕ್ಷಿತ್ ಶೆಟ್ಟಿ ಮಾತ್ರ 3 ವರ್ಷದಿಂದ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ.
ಆದರೆ ತಾನು ‘ಶ್ರೀಮನ್ನಾರಾಯಣ’ನ ಅವತಾರದಲ್ಲಿ ದರ್ಶನ ಕೊಡ್ತೀನಿ ಅಂತ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದ ರಕ್ಕಿ ಆಗಾಗ ‘ಶ್ರೀಮನ್ನಾರಾಯಣ’ನ ಬಗ್ಗೆ ಸ್ವೀಟ್ ನ್ಯೂಸ್ ಕೊಡುತ್ತಾ ಸಖತ್ ಸದ್ದು ಮಾಡ್ತಾನೇ ಬಂದಿದ್ದಾರೆ. ಈಗ ಶ್ರೀಮನ್ನಾರಾಯಣನ ದರ್ಶನಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.
ಹೌದು ಡಿಸೆಂಬರ್ 27ಕ್ಕೆ ರಕ್ಷಿತ್ ಶೆಟ್ಟಿ ಅಭಿನಯದ, ಸಚಿನ್ ರವಿ ಆ್ಯಕ್ಷನ್ ಕಟ್ ಹೇಳಿರುವ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ರಿಲೀಸ್ ಆಗಲಿದೆ. ವಿಶೇಷ ಅಂದ್ರೆ 2016ರ ಡಿಸೆಂಬರ್ 30ರಂದು ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆಗಿತ್ತು. ಆ ಸಿನಿಮಾದ ನಂತರ ಬರುತ್ತಿರುವ ಶ್ರೀಮನ್ನಾರಾಯಣ ಅದೇ ಡೇಟಿನ ಆಸುಪಾಸಲ್ಲಿದೆ! ಅಂದು ಕಿರಿಕ್ ಪಾರ್ಟಿ ಇಂದು ಶ್ರೀಮನ್ನಾರಾಯಣ.

LEAVE A REPLY

Please enter your comment!
Please enter your name here