‘ಕಿರಿಕ್ ಪಾರ್ಟಿ’ಯ ‘ಶ್ರೀಮನ್ನಾರಾಯಣ’ ಅವತಾರ ಹೇಗಿದೆ ಗೊತ್ತಾ?

0
145

ರಕ್ಷಿತ್ ಶೆಟ್ಟಿ ಎರಡು ವರ್ಷದ ನಂತ್ರ ಕಮ್​ ಬ್ಯಾಕ್ ಆಗ್ತಿದ್ದಾರೆ. ‘ಶ್ರೀಮನ್ನಾರಯಣ’ ಅವತಾರದಲ್ಲಿ ಕಿರಿಕ್ ಸ್ಟಾರ್ ಬರ್ತಿದ್ದಾರೆ. ಅವನೇ ಶ್ರೀಮನ್ನಾರಾಯಣ ಟೀಸರ್ ರಿಲೀಸ್ ಆಗಿದೆ. 

ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ ತೆರೆ ಮೇಲೆ ಕಾಣದೇ ಹೆಚ್ಚು ಕಮ್ಮಿ 3 ವರ್ಷವಾಗಿದೆ. 2016ರ ಕೊನೆಯಲ್ಲಿ ರಕ್ಕಿ ನಟನೆಯ ಕಿರಿಕ್ ಪಾರ್ಟಿ ಸಿನಿಮಾ ತೆರೆಕಂಡು ದೊಡ್ಡಮಟ್ಟಿನ ಯಶಸ್ಸು ಗಳಿಸಿತ್ತು. ಆದ್ರೆ, ಆ ಬಳಿಕ ರಕ್ಕಿ ನಟನೆಯ ಒಂದೇ ಒಂದು ಸಿನಿಮಾ ತೆರೆಕಂಡಿಲ್ಲ.

ಇದೀಗ ಬಹುನಿರೀಕ್ಷಿತ ‘ಅವನೇ ಶ್ರೀಮನ್ನಾರಾಯಣ’ ಟೀಸರ್ ರಿಲೀಸ್ ಆಗಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಡಿಫ್ರೆಂಟ್ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ನೋಡಿದ ಫ್ಯಾನ್ಸ್ ವ್ಹಾವ್, ಸಿನಿಮಾ ಹಾಲಿವುಡ್ ರೇಂಜ್​ಗಿರೋದಂತೂ ಪಕ್ಕಾ ಅಂತಿದ್ದಾರೆ.

“ರಾಕ್ಷಸರನ್ನು ಗೆಲ್ಲಬೇಕಾದರೆ ಮೊದಲು ನಮ್ಮೊಳಗಿನ ರಾಕ್ಷಸನನ್ನು ಕೊಂದು ಹಾಕಬೇಕು. ಅಲ್ಲಿ ನ್ಯಾಯ, ನೀತಿ ಮುಂತಾದ ಒಳ್ಳೆಯ ಗುಣಗಳನ್ನು ತುಂಬಿಕೊಳ್ಳಬೇಕು. ಆಗಲೇ ರಾಕ್ಷಸರನ್ನು ಸಂಹಾರ ಮಾಡುವ ಶಕ್ತಿ ನಮ್ಮೊಳಗೆ ಬರಲು ಸಾಧ್ಯ” ಅನ್ನೋ ಡೈಲಾಗ್ ಸಖತ್ತಾಗಿದ್ದು, ಫ್ಯಾನ್ಸ್ ಫುಲ್​ ಫಿದಾ ಆಗಿದ್ದಾರೆ.

ಕಳೆದ ಬಾರಿ ರಕ್ಕಿಯ ಬರ್ತ್ಡ್ ಡೇ ದಿನ ಮೊದಲ ಟೀಸರ್ ಬಿಡುಗಡೆ ಆಗಿತ್ತು. ಆ ಟೀಸರ್​ನಲ್ಲಿ ರಕ್ಷಿತ್ ಶೆಟ್ಟಿ ತನಗೆ ತಾನೇ ಹ್ಯಾಪಿ ಬರ್ತ್​ ಡೇ ಟು ಮಿ ಅಂತ ಹೇಳಿಕೊಂಡಿದ್ರು. ಅದು ಈ ಟ್ರೇಲರ್​​​​​​​ನಲ್ಲಿ ಟ್ಯೂನ್ ರೂಪ ಪಡೆದಿರೋದು ವಿಶೇಷ.

ಅದೇರೀತಿ ನಿನ್ನಯಷ್ಟೇ ಪೋಸ್ಟರ್ ರಿಲೀಸ್ ಆಗಿದ್ದು. ಬಾಲಿವುಡ್​ ನ ‘ಫಟಾ ಪೋಸ್ಟರ್ ನಿಖ್ಲಾ ಹೀರೋ’ ಸಿನಿಮಾದ ಪೋಸ್ಟರ್ ಅನ್ನು ಹೋಲುವಂತಿದೆ.

ಟೀಸರ್ ನೋಡಿದ್ರೆ, ಇದೊಂದು ಪಕ್ಕಾ ಕಮರ್ಷಿಯಲ್​ ಸಿನಿಮಾವಾಗಿದ್ದು, ಮಾಸ್​ ಪ್ರೇಕ್ಷಕರನ್ನು ಸೆಳೆಯುವ ಆ್ಯಕ್ಷನ್​ ಸಹ ಇದೆ ಅಂತ ಗೊತ್ತಾಗ್ತಿದೆ. ಚಿತ್ರದ ಬಗ್ಗೆ ಈ ಟೀಸರ್ ನಿರೀಕ್ಷೆಯನ್ನು ಹೆಚ್ಚು ಮಾಡಿದ್ದು ಸಿನಿಮಾ ರಿಲೀಸ್​ ಗೆ ಫ್ಯಾನ್ಸ್ ಕಾಯ್ತಿದ್ದಾರೆ.

ಇನ್ನು ರಕ್ಷಿತ್ ಗೆ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್ ನಟಿಸಿದ್ದಾರೆ. ಸಚಿನ್ ರವಿ ಆ್ಯಕ್ಷನ್ ಕಟ್ ಹೇಳಿದ್ದು, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್​ ಮತ್ತಿತರರು ತಾರಗಣದಲ್ಲಿದ್ದಾರೆ.

LEAVE A REPLY

Please enter your comment!
Please enter your name here