Home ರಾಜ್ಯ ಬೆಂಗಳೂರು ಸುಬ್ರಮಣಿ ಹಾವಳಿಗೆ ವಿಲ್ಲಾ ಮಂದಿ ಸುಸ್ತೋ ಸುಸ್ತು..!

ಸುಬ್ರಮಣಿ ಹಾವಳಿಗೆ ವಿಲ್ಲಾ ಮಂದಿ ಸುಸ್ತೋ ಸುಸ್ತು..!

ಬೆಂಗಳೂರು: ಆಟೋ ಚಾಲಕ ಸುಬ್ರಮಣಿ ಹಾವಳಿಗೆ ಸುತ್ತಮುತ್ತಲಿನ ಜನ ಬೇಸತ್ತುಹೋಗಿದ್ದಾರೆ. ಐಟಿ ದಾಳಿ ನಡೆದ ನಂತರವೇ ಸುಬ್ರಮಣಿ ಫೇಮಸ್​ ಆಗಿದ್ದು. ಇದೀಗ ಆಟೋ ಡ್ರೈವರ್ ಸುಬ್ರಮಣಿ ಕಾಟಕ್ಕೆ ಅಲ್ಲಿರೋ ಜನ ವಿಲ್ಲಾ ಖಾಲಿ ಮಾಡೋ ಪರಿಸ್ಥಿತಿ ಬಂದಿದೆ.

ನಡು ರಸ್ತೆಯಲ್ಲಿ ವಾಹನ ಓಡಾಡೋ ಸ್ಥಳದಲ್ಲೇ ಮಗನ ಬರ್ತ್​ ಡೇ ಫಂಕ್ಷನ್​​, ಸಾರ್ವಜನಿಕರ ಸ್ಥಳದಲ್ಲಿ ಸ್ನೇಹಿತರೊಡನೆ ಡಿನ್ನರ್ ಪಾರ್ಟಿ, ಪಾರ್ಟಿ ಕಸ ಎಲ್ಲೆಂದರಲ್ಲಿ ಬಿಸಾಕಿ ಸ್ವಚ್ಛತೆ ಹಾಳು ಮಾಡೋದು ಹೀಗೆ ಆಟೋ ಚಾಲಕ ಸುಬ್ರಮಣಿ ಹಾವಳಿಗೆ ಸ್ಥಳೀಯರು‌ ಸುಸ್ತೋ..ಸುಸ್ತು.

ಕುಟುಂಬಸ್ಥರು ಓಡಾಡೋ ಗಾರ್ಡನ್​​​ನಲ್ಲಿ ಎಲ್ಲೆಂದರಲ್ಲಿ ಕುಳಿತು ಸ್ನೇಹಿತರೊಡನೆ ಡಿನ್ನರ್ ಪಾರ್ಟಿ ಮಾಡೋ ಸುಬ್ರಮಣಿ ಪಾರ್ಟಿ ಬಳಿಕ ಎಲ್ಲೆಂದರಲ್ಲಿ ಕಸ ಹಾಕ್ತಾರೆ. ವಾಹನಗಳು ಓಡಾಡೋ ನಡು ರಸ್ತೆಯಲ್ಲೇ ಮಗನ ಬರ್ತಡೇ ಸೆಲೆಬ್ರೆಶನ್ ಮಾಡ್ತಾರೆ. ತಡರಾತ್ರಿ‌ ಎಸ್ಟೇಟ್ ಒಳಗೆ ಎಲ್ಲೆಂದರಲ್ಲಿ ಎಣ್ಣೆ ಮಾರ್ಟಿ ಮಾಡಿ ಅವಾಂತರ ಮಾಡ್ತಾರೆ. ಅನುಮತಿ ಪಡೆಯದೇ  ಹತ್ತಾರು ಆಟೋಗಳನ್ನು ಎಸ್ಟೇಟ್ ಒಳಗೆ ತಂದು ಕಾರ್ಯಕ್ರಮಗಳನ್ನು ಮಾಡುತ್ತಾ ಕಿರಿಕಿರಿ ಮಾಡ್ತಾರೆ ಅಂತ ಜನ ಆರೋಪಿಸಿದ್ದಾರೆ. ಬುದ್ಧಿವಾದ ಹೇಳಿದವರಿಗೆ ಆವಾಜ್ ಹಾಕೋ ಸುಬ್ರಮಣಿ ಹಾವಳಿಗೆ ಜನ ವಿಲ್ಲಾ ಖಾಲಿ ಮಾಡೋ ಸ್ಥೀತಿ ತಲುಪಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments