ರಾಮನಗರ: ರಾಜ್ಯ ಸರ್ಕಾರ ಲಿಂಗಾಯತ ಸಮುದಾಯದ ಪ್ರಾಧಿಕಾರ ಮಾಡಿ ಅದಕ್ಕೆ ನಿರ್ದೇಶಕರನ್ನು ನೇಮಕ ಮಾಡಿದೆ. ಈ ನಿಟ್ಟಿನಲ್ಲಿ ಹಲವು ಸಮುದಾಯದ ಮುಖಂಡರು ನಮ್ಮ ಸಮುದಾಯಕ್ಕೂ ಪ್ರಾಧಿಕಾರ ರಚನೆ ಮಾಡಬೇಕು ಎಂದು ರಾಜ್ಯಾದ್ಯಂತ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಅದೇ ರೀತಿ ಕುಸ್ತಿ ಹಾಗೂ ಗರಡಿಮನೆ ಪೈಲ್ವಾನ್ ಗಳು ಸಹ ಇದೀಗ ತಮ್ಮ ಬೇಡಿಕೆಯನ್ನ ಹೊರ ಹಾಕಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕುಸ್ತಿ ಪಟ್ಟುಗಳು ಮಾತನಾಡಿ ದೇಸಿ ಕ್ರೀಡೆಯಾದ ಕುಸ್ತಿ ಹಾಗೂ ಗರಡಿ ಆಟವನ್ನು ಉಳಿಸಿಕೊಳ್ಳಬೇಕಿದೆ. ಮೈಸೂರು ಪ್ರಾಂತ್ಯದಲ್ಲಿ ಅತೀ ಹೆಚ್ಚು ಕುಸ್ತಿ ಕ್ರೀಡಾಪಟುಗಳು ಇದ್ದಾರೆ. ನಮ್ಮ ನೆಲದ ಕ್ರೀಡೆಯನ್ನ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕುಸ್ತಿ ಹಾಗೂ ಪೈಲ್ವಾನಗಳಿಗೂ ಸಹ ಪ್ರಾಧಿಕಾರ ರಚನೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು ಪ್ರಾಧಿಕಾರ ರಚನೆಯಾಗಿದ್ದೇ ಆದಲ್ಲಿ ಕುಸ್ತಿ ಕ್ರೀಡೆ ಮೈಸೂರು ಹಾಗೂ ನಮ್ಮ ರಾಜ್ಯ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಸಹ ದೇಸಿಕ್ರೀಡೆಯನ್ನ ಉಳಿಸಿಕೊಳ್ಳಬ ಹುದು. ಇದರಿಂದ ಸರ್ಕಾರ ಈ ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ ಕುಸ್ತಿಪಟುಗಳಿಗೂ ಪ್ರಾಧಿಕಾರ ರಚನೆ ಮಾಡಿ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.