ವರ್ಲ್ಡ್​ಕಪ್​ ಫೈನಲ್​ ಪ್ರವೇಶಿಸಿದ ಇಂಗ್ಲೆಂಡ್​

0
690

ವರ್ಲ್ಡ್​​ಕಪ್​ನ ಎರಡನೇ ಸೆಮಿಫೈನಲ್​ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿ ಅತೀಥೇಯ ಇಂಗ್ಲೆಂಡ್ ಫೈನಲ್​ಗೆ ಪ್ರವೇಶಿಸಿದೆ. 

ಬರ್ಮಿಂಗ್​​ಹ್ಯಾಮ್​ನ ಎಡ್ಜ್​​​​ಬ್ಯಾಸ್ಟನ್​ನಲ್ಲಿ ನಡೆದ ಮ್ಯಾಚ್​ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್​ಗಿಳಿದ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಎದುರಿಸಿತು. ವೇಗಿ ಜೋಫ್ರಾ ಅರ್ಚರ್​​ ಆಸಿಸ್​ಗೆ 2ನೇ ಓವರ್​ನಲ್ಲೇ ಶಾಕ್​ ನೀಡಿದ್ರು. ನಾಯಕ ಫಿಂಚ್​ರನ್ನು ಎಲ್​ಬಿ ವಿಕೆಟ್​ಗೆ ಕೆಡವಿದ ಜೋಫ್ರಾ ಇಂಗ್ಲೆಂಡ್ ಬಳಗಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ಫಿಂಚ್​ ಬೆನ್ನಲ್ಲೇ ಟೂರ್ನಿಯೂದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿದ್ದ ಡೇವಿಡ್​ ವಾರ್ನರ್​ 9 ರನ್​ಗಳಿಸಿ ಔಟಾದ್ರು. ವಾರ್ನರ್​ ಬೆನ್ನಲ್ಲೇ ಪೀಟರ್ ಹ್ಯಾಂಡ್ಸ್​ಕಂಬ್​ರನ್ನ ಕ್ಲೀನ್ ಬೌಲ್ಡ್​ ಮಾಡಿದ ಕ್ರಿಸ್​ವೋಕ್ಸ್ ಆಸೀಸ್​ಗೆ ಮತ್ತೊಂದು ಶಾಕ್ ನೀಡಿದರು.

ಬಳಿಕ ಜೊತೆಗೂಡಿದ ಅಲೆಕ್ಸ್​ ಕ್ಯಾರಿ ಹಾಗೂ ಸ್ಟೀವ್ ಸ್ಮಿತ್ ಎಚ್ಚರಿಕೆಯ ಇನ್ನಿಂಗ್ಸ್​​ ಕಟ್ಟಿದ್ರು. ತಂಡವನ್ನ ಆರಂಭಿಕ ಆಘಾತದಿಂದ ಪಾರು ಮಾಡಿದ ಈ ಜೋಡಿ 4ನೇ ವಿಕೆಟ್​ಗೆ 100 ರನ್​ ಕಲೆಹಾಕಿದ್ರು. ಇದಕ್ಕೂ ಮುನ್ನ ಪಂದ್ಯದ 7ನೇ ಓವರ್​ನ ಜೋಫ್ರಾ ಅರ್ಚರ್​ ಎಸೆತದಲ್ಲಿ ಕ್ಯಾರಿ ಇಂಜುರಿಗೆ ತುತ್ತಾಗಿದ್ರು. ಸುರಿಯುತ್ತಿದ್ದ ರಕ್ತದ ನಡುವೆಯೂ ಅಮೂಲ್ಯ ಇನ್ನಿಂಗ್ಸ್​ ಕಟ್ಟಿದ ಕ್ಯಾರಿ 46 ರನ್​ ಸಿಡಿಸಿ ನಿರ್ಗಮಿಸಿದ್ರು.
ಕ್ಯಾರಿ ಬೆನ್ನಲ್ಲೇ ಆಲ್​ರೌಂಡರ್​ ಮಾರ್ಕಸ್​​ ಸ್ಟೋಯಿನಿಸ್​ ಸೊನ್ನೆ ಸುತ್ತಿದ್ರು. ಒಂದೆಡೆ ಬ್ಯಾಕ್​ ಟು ಬ್ಯಾಕ್ ವಿಕೆಟ್ ಉರುಳಿದರೂ, ಇನ್ನೊಂದೆಡೆ ತಾಳ್ಮೆಯ ಆಟವಾಡಿದ ಸ್ಟೀವ್​ ಸ್ಮಿತ್ 72 ಎಸೆತಗಳಲ್ಲಿ ತಮ್ಮ ಅರ್ಧಶತಕ ಸಿಡಿಸಿದ್ರು. 

ಇನ್ನು 22 ರನ್​ಗಳಿಸಿ ಗ್ಲೇನ್ ಮ್ಯಾಕ್ಸ್​ವೆಲ್ ಔಟಾದ್ರೆ, ಪ್ಯಾಟ್​ ಕಮ್ಮಿನ್ಸ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ತಾಳ್ಮೆಯ ಇನ್ನಿಂಗ್ಸ್​ ಕಟ್ಟಿದ ಸ್ಮಿತ್​ 85 ರನ್​ಗಳಿಸಿದ್ದಾಗ ರನೌಟ್​ ಬಲೆಗೆ ಬಿದ್ದು ನಿರ್ಗಮಿಸಿದ್ರು. ಸ್ಮಿತ್​ ಬೆನ್ನಲ್ಲೇ 29 ರನ್​ಗಳಿಸಿದ್ದ ಮಿಚೆಲ್​ ಸ್ಟಾರ್ಕ್​ ಆಟವೂ ಅಂತ್ಯವಾಯ್ತು. ಅಂತಿಮವಾಗಿ ಜೇಸನ್​ ಬೆಹರೇನ್​ಡ್ರಾಫ್​ ಪತನದೊಂದಿಗೆ ಆಸ್ಟ್ರೇಲಿಯಾ 223 ರನ್​ಗಳಿಗೆ ಆಲೌಟ್​ ಆಯ್ತು.

224 ರನ್​ಗಳ ಸ್ಪರ್ಧಾತ್ಮಕ ಟಾರ್ಗೆಟ್​ ಬೆನ್ನತ್ತಿದ ಅತಿಥೇಯ ಇಂಗ್ಲೆಂಡ್​ ಉತ್ತಮ ಆರಮಭ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ಜೇಸನ್​ ರಾಯ್​​​, ಜಾನಿ ಬೈರ್​ಸ್ಟ್ರೋ ಲೀಲಾಜಾಲವಾಗಿ ಬ್ಯಾಟ್​ ಬೀಸಿದ್ರು. ಮೊದಲ ವಿಕೆಟ್​ಗೆ 124 ರನ್​ಗಳು ಹರಿದು ಬಂದ್ವು.
ಉತ್ತಮ ಇನ್ನಿಂಗ್ಸ್​ ಕಟ್ಟಿದ ಬೈರ್​ಸ್ಟ್ರೋ 34 ರನ್​ಗಳಿಸಿ ಔಟಾದ್ರು. ಅತ್ತ ಅಮೋಘ ಆಟ ಮುಂದುವರೆಸಿದ ರಾಯ್​ ಅರ್ಧಶತಕ ಸಿಡಿಸಿ ಮಿಂಚಿದ್ರು. 9 ಬೌಂಡರಿ, 5 ಸಿಕ್ಸರ್​​ ಸಿಡಿಸಿ 85 ರನ್​ ಕಲೆ ಹಾಕಿದ ಜೇಸನ್​ ರಾಯ್​, ಕುಮಿನ್ಸ್ ಎಸೆತದಲ್ಲಿ ಅಲೆಕ್ಸ್​ ಕ್ಯಾರಿಗೆ ಕ್ಯಾಚ್​ ನೀಡಿ ನಿರ್ಗಮಿಸಿದ್ರು.

ಬಳಿಕ 3 ವಿಕೆಟ್​ಗೆ ಜೊತೆಯಾದ ಜೋ ರೂಟ್​, ನಾಯಕ ಇಯಾನ್​ ಮಾರ್ಗನ್​ ಭರ್ಜರಿ ಜೊತೆಯಾಟವಾಡಿದ್ರು. 79 ರನ್​ಗಳ ಮುರಿಯದ ಜೊತೆಯಾಟವಾಡಿದ ಈ ಇಬ್ಬರು ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಅಂತಿಮವಾಗಿ 32.1 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು ಗುರಿ ಮುಟ್ಟಿದ ಅತಿಥೇಯ ಬಳಗ ಫೈನಲ್​ ಪ್ರವೇಶಿಸಿತು.

LEAVE A REPLY

Please enter your comment!
Please enter your name here