ಶೃಂಗೇರಿ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗ ಗ್ರಾಮದಲ್ಲಿರೋ ಋಷ್ಯಶೃಂಗನ ಬಗ್ಗೆ ಖಂಡಿತಾ ನಿಮ್ಗೆ ಗೊತ್ತಿರುತ್ತೆ. ಋಷ್ಯಶೃಂಗನಿಗೆ ಪ್ರಾರ್ಥಿಸಿದರೆ ಮಳೆ ಆಗುತ್ತೆ ಅನ್ನೋ ನಂಬಿಕೆ ಅನಾದಿಕಾಲದಿಂದಲೂ ಇದೆ. ಋಷ್ಯಶೃಂಗನ ಮಹಿಮೆ ದೂರದ ಆಸ್ಟ್ರೇಲಿಯಾಕ್ಕೂ ಹಬ್ಬಿದೆ. ಋಷ್ಯಶೃಂಗನ ಪೂಜೆಯಿಂದಾಗಿ ಆಸ್ಟ್ರೇಲಿಯಾದಲ್ಲಿ ಮಳೆಯಾಗಿದೆ.
ಹೌದು, ಋಷ್ಯಶೃಂಗನಿಗೆ ಪೂಜೆ ಸಲ್ಲಿಸಿದ ಬಳಿಕ ಕಾಡ್ಗಿಚ್ಚಿನ ರುದ್ರನರ್ತನಕ್ಕೆ ತತ್ತರಿಸಿದ್ದ ಕಾಂಗೂರು ನಾಡಿಗೆ ವರುಣ ಕೃಪೆ ತೋರಿದ್ದಾನೆ. ಅಸಂಖ್ಯಾತ ಪ್ರಾಣಿಗಳು ಕಾಡ್ಗಿಚ್ಚಿನಿಂದ ದಹನವಾಗಿದ್ದವು. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಹೈದರಾಬಾದ್ ಮೂಲದ ಯುವತಿಯೊಬ್ಬರು ನೊಂದು ಮಳೆಗಾಗಿ ಋಷ್ಯಶೃಂಗನಿಗೆ ಪೂಜೆ ಮಾಡಿಸಲು ಅಮ್ಮನ ಬಳಿ ಹೇಳಿದ್ರು. ಅವರ ಅಮ್ಮ ಬಂದು ಪೂಜೆ ಮಾಡಿಸಿದ ಬಳಿಕ ಆಸ್ಟ್ರೇಲಿಯಾದಲ್ಲಿ ಧಾರಾಕಾರ ಮಳೆಯಾಗಿದೆ. ನಾಲ್ಕು ವರ್ಷದ ಹಿಂದೆಯೂ ಒಮ್ಮೆ ಋಷ್ಯಶೃಂಗನ ಪೂಜೆಯಿಂದ ಆಸ್ಟ್ರೇಲಿಯಾದಲ್ಲಿ ಮಳೆಯಾಗಿತ್ತು ಎಂಬುದನ್ನು ಕೂಡ ಈ ವೇಳೆ ಸ್ಮರಿಸಬಹುದು.