ಸದನದಲ್ಲಿ ಇಂದೂ ‘ಆಡಿಯೋ ವಾರ್​’..!

0
201

ಬೆಂಗಳೂರು:  5 ನೇ ದಿನದ ವಿಧಾನಸಭಾ ಕಲಾಪ ನಡೆಯುತ್ತಿದ್ದು, ‘ಆಡಿಯೋ ವಾರ್​’ನಲ್ಲೇ ಕಲಾಪ ಮುಂದುವರೆದಿದೆ.

‘ಆಪರೇಷನ್​ ಆಡಿಯೋ’ ವಿಚಾರದ ಬಗ್ಗೆ ಎಸ್​ಐಟಿ ತನಿಖೆಗೆ ಒಪ್ಪಿಸುವ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲನೆ ನಡೆಸಬೇಕು ಅಂತ ಬಿಜೆಪಿ ಸದನದ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿತು. ಇದರಿಂದ ಇಂದಿನ ಕಲಾಪದಲ್ಲೂ ಆಡಿಯೋ ವಿಚಾರದ ಗದ್ದಲಕ್ಕೆ ಸದನ ಸಾಕ್ಷಿಯಾಗಿದೆ.

ಕಲಾಪ ಶುರುವಾಗ್ತಿದಂತೆ ಮಾತನಾಡಲಾರಂಭಿಸಿದ ಬಿಜೆಪಿ ಶಾಸಕ ಮಾಧುಸ್ವಾಮಿ, ಆಡಿಯೋ ವಿಚಾರದ ಬಗ್ಗೆ ಎಸ್​ಐಟಿ ತನಿಖೆ ತೀರ್ಮಾನವನ್ನು ಮರುಪರಿಶೀಲನೆ ಮಾಡಿ ಅಂತ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ರು. ‘ನಿಮ್ಮ ತೀರ್ಮಾನಕ್ಕೆ ನಾವು ಅಗೌರವರ ಕೊಡುತ್ತಿಲ್ಲ. ಆದರೆ, ಎಸ್​ಐಟಿ ತನಿಖೆಗೆ ವಿರೋಧ ವ್ಯಕ್ತಪಡಿಸ್ತೀವಿ. ಯಾಕಂದ್ರೆ 15 ದಿನದಲ್ಲಿ ಎಸ್​ಐಟಿಯಿಂದ ಯಾವ ಸಾಧನೆಯೂ ಆಗಲ್ಲ. ನಿಮ್ಮ ಮನಸ್ಸಲ್ಲಿ ಏನಿದೆಯೋ ಅದು ಈಡೇರಲ್ಲ. ಹಾಗಾಗಿ ಎಸ್​ಐಟಿ ತನಿಖೆ ಬೇಡ’ ಎಂದು ಆಗ್ರಹಿಸಿದ್ರು.

LEAVE A REPLY

Please enter your comment!
Please enter your name here