Saturday, May 28, 2022
Powertv Logo
Homeರಾಜ್ಯಹುಬ್ಬಳ್ಳಿಯ ಪೊಲೀಸ್​ ಸ್ಟೇಷನ್ ಮೇಲೆ ಅಟ್ಯಾಕ್ ಮಾಡಿದ್ದಾರೆ : ಶೋಭಾ ಕರಂದ್ಲಾಜೆ

ಹುಬ್ಬಳ್ಳಿಯ ಪೊಲೀಸ್​ ಸ್ಟೇಷನ್ ಮೇಲೆ ಅಟ್ಯಾಕ್ ಮಾಡಿದ್ದಾರೆ : ಶೋಭಾ ಕರಂದ್ಲಾಜೆ

ಹೊಸಪೇಟೆ : ಯಾರೋ ಸ್ಟೇಟಸ್ ಹಾಕಿಕೊಂಡಿದ್ದ ಅಂತ ಹುಬ್ಬಳ್ಳಿಯಲ್ಲಿ ಸ್ಟೇಷನ್ ಮೇಲೆ ಅಟ್ಯಾಕ್ ಮಾಡಿದ್ದಾರೆ ತಕ್ಷಣ ಗೂಂಡಾ ಆಕ್ಟ್ ಅಡಿಯಲ್ಲಿ ಬಂಧನ ಮಾಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕೆ.ಜಿ ಹಳ್ಳಿ ಡಿಜೆ ಹಳ್ಳಿಯಲ್ಲಿ ಸ್ಟೇಷನ್ ಹಾಳು ಮಾಡಿದ್ರು, ಇದೇ ರೀತಿಯ ಭಯೋತ್ಪಾದನೆ ಹುಬ್ಬಳ್ಳಿಯಲ್ಲಿ ಆಗಿದೆ. ಯಾರೋ ಸ್ಟೇಟಸ್ ಹಾಕಿಕೊಂಡಿದ್ದ ಅಂತ ಹುಬ್ಬಳ್ಳಿಯಲ್ಲಿ ಸ್ಟೇಷನ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ತಕ್ಷಣ ಗೂಂಡಾ ಆಕ್ಟ್ ಅಡಿಯಲ್ಲಿ ಬಂಧನ ಮಾಡಬೇಕು. ಹುಬ್ಬಳ್ಳಿ ಘಟನೆ ಸಾಮಾನ್ಯ ಘಟನೆ ಅಲ್ಲ. ಪೊಲೀಸರನ್ನ ಹೆಸರಿಸೋ ಕೆಲಸ ಹಾಡು ಹಗಲೇ ಮಚ್ಚು, ಲಾಂಗು ಹಿಡಿದು ಓಡಾಡಿದ್ದಾರೆ. ಹರ್ಷ ಕೊಲೆ ಕೂಡ ನಡೆಯಿತು. ಪೋಸ್ಟರ್ ಹಾಕಿದವನನ್ನ ಬಂಧಿಸಿ ಅಂತ ಹೇಳಬಹುದಿತ್ತು. ಆದ್ರೆ ಸಮಾಜದ ಸ್ವಾಸ್ತ ಹಾಳು ಮಾಡುವ ಕೆಲಸ ಮಾಡಲಾಗುತ್ತದೆ. ನಮ್ಮ ರಾಜ್ಯ ಮತ್ತೊಂದು ಕೇರಳ, ಪಶ್ಚಿಮ ಬಂಗಾಳ ಆಗಬಾರದು. ಕನ್ನಡಿಗರು ಶಾಂತಿ ಪ್ರಿಯರು, ಮತ್ತೊಮ್ಮೆ ಇದನ್ನ ಸಹಿಸಿಕೊಳ್ಳುವ ಕೆಲಸ ಆಗಬಾರದು ಎಂದರು.

- Advertisment -

Most Popular

Recent Comments