Tuesday, September 27, 2022
Powertv Logo
Homeರಾಜ್ಯಎಟಿಎಂನಲ್ಲಿ 100 ರ ಬದಲು 500 ರೂ ಡ್ರಾ! ಸಿಕ್ಕಿದ್ದೇ ಚಾನ್ಸ್ ಅಂತ ಮುಗಿಬಿದ್ದ ಜನ!

ಎಟಿಎಂನಲ್ಲಿ 100 ರ ಬದಲು 500 ರೂ ಡ್ರಾ! ಸಿಕ್ಕಿದ್ದೇ ಚಾನ್ಸ್ ಅಂತ ಮುಗಿಬಿದ್ದ ಜನ!

ಮಡಿಕೇರಿ : ಹಣ ಕಂಡರೆ ಹೆಣನೂ ಬಾಯಿ ಬಿಡುತ್ತೆ ಅನ್ನೋ ಗಾದೆ ಮಾತನ್ನು ಎಲ್ಲರೂ ಕೇಳಿರ್ತಿರಾ. ಇನ್ನು ಎಟಿಎಂನಲ್ಲಿ 100 ರ ಬದಲಿಗೆ 500 ರ ನೋಟು ಬರ್ತಿದೆ ಅಂದ್ರೆ ಯಾರು ತಾನೆ  ಸುಮ್ಮನೆ ಇರ್ತಾರೆ..!? ಬಂದಷ್ಟು ಬರ್ಲಿ ಅಂತ ಬಾಚಿಕೊಳ್ಳೋಕೆ ಮುಂದಾಗ್ತಾರೆ. ಇಲ್ಲಿ ನಡೆದಿದ್ದು ಅಷ್ಟೆ, ಮಡಿಕೇರಿಯ ಕೆನರಾ ಬ್ಯಾಂಕ್​​ನ ಎಟಿಎಂ ಒಂದರಲ್ಲಿ 100 ರೂಪಾಯಿಗೆ ವಿತ್​ಡ್ರಾ ಮಾಡಿಕೊಂಡ್ರೆ 500 ರೂಪಾಯಿ ಬಂದಿದೆ.

 ಕೊಹಿನೂರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂಗೆ ಹಣ ತುಂಬುವ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಯವರು  ವಹಿಸಿಕೊಂಡಿದ್ದರು. ಆದರೆ ಅವರ ಯಡವಟ್ಟಿನಿಂದ 100 ರ ಬದಲು 500 ರೂ ಬಂದಿದ್ದು,  ಇದನ್ನೇ ದುರುಪಯೋಗಪಡಿಸಿಕೊಂಡು ಕೆಲವರು 64,000 ಹಾಗೂ 50,000 ರೂಪಾಯಿಗಳಷ್ಟು ಹಣ ಡ್ರಾ ಮಾಡಿಕೊಂಡಿದ್ದಾರೆ. ಸುಮಾರು 1.70 ಲಕ್ಷ ರೂ ಹೆಚ್ಚುವರಿ ಹಣ ಗ್ರಾಹಕರ  ಕೈ ಸೇರಿದೆ.

ಖಾಸಗಿ ಏಜೆನ್ಸಿಯವರು ಕಳೆದ ಡಿಸೆಂಬರ್ 30ಕ್ಕೆ  ಎಟಿಎಂಗೆ ಹಣ ತುಂಬಿದ್ದು, ಸಿಬ್ಬಂದಿ 100ರ ಟ್ರೇಗೆ  500ರ ನೋಟು ತುಂಬಿದ್ದಾರೆ. ಇದರಿಂದಾಗಿ 500 ನೋಟು ಬರುವುದನ್ನು ಕಂಡ ಗ್ರಾಹಕರು ಪದೇ ಪದೇ ಹಣ ಡ್ರಾ ಮಾಡಿದ್ದಾರೆ. ಇದನ್ನು ನೋಡಿದ ಗ್ರಾಹಕರೊಬ್ಬರು ಏನೋ ಯಡವಟ್ಟಾಗಿದೆ ಎಂದು ತಿಳಿದು ಬ್ಯಾಂಕ್​ಗೆ ಕರೆ ಮಾಡಿದ್ದಾರೆ.  ಆ ನಂತರ ಎಚ್ಚೆತ್ತುಕೊಂಡ ಬ್ಯಾಂಕ್ ಗ್ರಾಹಕರ ಎಟಿಎಂ ಪಿನ್ ಆಧರಿಸಿ ಗ್ರಾಹಕರಿಗೆ ಕರೆ ಮಾಡಿ ಹಣ ವಾಪಸ್ಸು ಕೊಡುವಂತೆ ಹೇಳಿದ್ದಾರೆ. ಅದರಂತೆ ಕೆಲವೊಬ್ಬರು ಬ್ಯಾಂಕ್​ಗೆ ಹಣ ವಾಪಸ್ಸು ಮಾಡಿದ್ದು, ಇನ್ನು ಹಣ ಹಿಂತಿರುಗಿಸದವರಿಗೆ ಬ್ಯಾಂಕ್ ಪೊಲೀಸ್ ಮೂಲಕ ಕರೆ ಮಾಡಿಸಿ ಹಣ ಪಡೆದಿದೆ.

 

- Advertisment -

Most Popular

Recent Comments