Saturday, May 21, 2022
Powertv Logo
Homeದೇಶಸಾಂಪ್ರದಾಯಿಕ ಔಷಧಿಗೆ ವಿಶ್ವ ಆರೋಗ್ಯ ಸಂಸ್ಥೆ ಮನ್ನಣೆ

ಸಾಂಪ್ರದಾಯಿಕ ಔಷಧಿಗೆ ವಿಶ್ವ ಆರೋಗ್ಯ ಸಂಸ್ಥೆ ಮನ್ನಣೆ

ಗುಜರಾತ್‌ :ತವರು ರಾಜ್ಯ ಗುಜರಾತ್‌ನಲ್ಲಿ ಮೋದಿ ಮೂರು ದಿನಗಳ ಪ್ರವಾಸ ಮಾಡ್ತಿದ್ದಾರೆ.. ಈ ಬಾರಿಯ ವಿಶೇಷ ಅಂದ್ರೆ ವಿಶ್ವದಲ್ಲೇ ಮೊಟ್ಟಮೊದಲ ಸಾಂಪ್ರದಾಯಿಕ ಔಷಧಗಳ ಜಾಗತಿಕ ಕೇಂದ್ರ ಉದ್ಘಾಟಿಸಿದ್ದಾರೆ..

ಹೌದು, ಇದು ಅನಾವರಣಗೊಂಡಿರೋದು ಜಾಮ್ ನಗರದಲ್ಲಿ. ಭಾರತದ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳು ಜಾಗತಿಕ ಮಟ್ಟದಲ್ಲಿ ಭಾರೀ ಮನ್ನಣೆ ಪಡೆಯುತ್ತಿವೆ. ಈ ಹೊತ್ತಿನಲ್ಲೇ ಭಾರತದಲ್ಲಿ ಸಾಂಪ್ರದಾಯಿಕ ಔಷಧಗಳ ಕುರಿತಾದ ಜಾಗತಿಕ ಕೇಂದ್ರವೊಂದನ್ನು ತೆರೆಯುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿತ್ತು.

ವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ಔಷಧಿಗಳ ಜಾಗತಿಕ ಕೇಂದ್ರ ಜಗತ್ತಿಗೆ ಉತ್ತಮ ವೈದ್ಯಕೀಯ ಪರಿಹಾರಗಳನ್ನು ನೀಡುವುದಲ್ಲದೆ ಸಾಂಪ್ರದಾಯಿಕ ಔಷಧಿಗಳಿಗೆ ಹೊಸ ಯುಗವನ್ನು ಪ್ರಾರಂಭಿಸುತ್ತದೆ ಎಂದು ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಇಂದು ಸ್ಥಾಪನೆಯಾಗಿರುವ ವಿಶ್ವ ಆರೋಗ್ಯ ಸಂಸ್ಥೆಯ ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ನಲ್ಲಿ ಭಾರತದ ಬಗ್ಗೆ ಡಾ. ಟೆಡ್ರೊಸ್ ಘೆಬ್ರೆಯೆಸಸ್ ಹೊಂದಿರುವ ಪ್ರೀತಿಯನ್ನು ತೋರಿಸುವುದು ಮಾತ್ರವಲ್ಲ, ಸಾಂಪ್ರದಾಯಿಕ ಔಷಧವನ್ನು ಪುನರುತ್ಪಾದಿಸಲಾಗುವ ನಿಟ್ಟಿನಲ್ಲಿ ಭಾರತದ ಬದ್ಧತೆಯನ್ನ ತೋರಿಸಿದೆ ಎಂದು ಹೇಳಿದರು.

- Advertisment -

Most Popular

Recent Comments