ಬಾಹ್ಯಾಕಾಶದಲ್ಲಿ 328 ದಿನ ಕಳೆದು ದಾಖಲೆ ನಿರ್ಮಿಸಿದ ಕ್ರಿಸ್ಟಿನಾ..!

0
470

ಗಗನಯಾನದಲ್ಲಿ ನಾಸಾದ ಮಹಿಳಾ ಗಗನಯಾತ್ರಿ ಪೆಗ್ಗಿ ವಿಟ್ಸನ್ 289 ದಿನಗಳ ಕಾಲ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದು ಇತಿಹಾಸ ಸೃಷ್ಟಿಸಿದ್ದರು. ಇದೀಗ ನಾಸಾದ ಇನ್ನೊಬ್ಬ ಮಹಿಳಾ ಗಗನಯಾತ್ರಿ ಕ್ರಿಸ್ಟಿನಾ ಕೋಚ್ ಬಾಹ್ಯಾಕಾಶದಲ್ಲಿ ಬರೋಬ್ಬರಿ 328 ದಿನಗಳ ಕಾಲ ಕಳೆದು ವಿಟ್ಸನ್ ದಾಖಲೆ ಮುರಿದು ಹೊಸ ಇತಿಹಾಸ ಬರೆದಿದ್ದಾರೆ.

ಕ್ರಿಸ್ಟಿನಾ ಬಹುದಿನಗಳ ಕಾಲ ಸ್ಪೇಸ್​ನಲ್ಲಿದ್ದು ದಾಖಲೆ ಸೃಷ್ಟಿಸಿರುವುದಲ್ಲದೆ ಸ್ಪೇಸ್ ವಾಕನ್ನು ಕೂಡಾ ಮಾಡಿದ್ದಾರೆ. ಇನ್ನು ಇವರ ಜೊತೆಗೆ ಜೆಸ್ಸಿಕಾ ಮೀರ್ ಕೂಡಾ ಸ್ಪೇಸ್ ವಾಕ್ ಮಾಡಿದ್ದಾರೆ. ಕ್ರಿಸ್ಟಿನಾ ಸೇರಿದಂತೆ ಇನ್ನಿಬ್ಬರು ಗಗನಯಾತ್ರಿಗಳ ತಂಡ ಬರೋಬ್ಬರಿ 328 ದಿನಗಳ ಕಾಲ ಸ್ಪೇಸ್​ನಲ್ಲಿದ್ದು, ಇಂದು ಬೆಳಗ್ಗೆ ಭೂಮಿಗೆ ಬಂದಿಳಿದಿದ್ದಾರೆ.

ಕ್ರಿಸ್ಟಿನಾ ಒಟ್ಟು ಆರು ಸ್ಪೇಸ್ ವಾಕ್ ಮಾಡಿದ್ದು, ಅದರಲ್ಲಿ ಅಂತರಾಷ್ಟ್ರೀಯ ಸ್ಪೇಸ್ ಸ್ಟೇಷನ್​ನ ಹೊರಗಡೆ  ಸತತ 12 ಗಂಟೆ ಹದಿನೈದು ನಿಮಿಷ ಸಮಯ ಕಳೆದಿದ್ದಾರೆ. ಅವರು ಅಲ್ಲಿ ಅನೇಕ ಸಂಶೋಧನೆಗಳನ್ನು ನಡೆಸಿದ್ದು, ಮುಖ್ಯವಾಗಿ ಬಾಹ್ಯಾಕಾಶದಲ್ಲಿ ನಿಂತು ಮನುಷ್ಯನಿಗಾಗುವ ಎಫೆಕ್ಟ್​ಗಳೇನು? ಬಾಹ್ಯಾಕಾಶದಲ್ಲಿರುವ ಮನುಷ್ಯ ಹಾಗೂ ಗುರುತ್ವಾಕರ್ಷಣೆ ಬಗ್ಗೆ ಸಂಶೋಧನೆ ನಡೆಸಿದ್ದಾರೆ.

 

LEAVE A REPLY

Please enter your comment!
Please enter your name here