ಅಚ್ಚರಿಗೆ ಕಾರಣವಾಯ್ತು ಅಷ್ಟಮಂಗಲ ಪ್ರಶ್ನೆ..!

0
508

ಅಷ್ಟಮಂಗಲ ಪ್ರಶ್ನೆಯಿಂದ 500 ವರ್ಷದ ಹಿಂದಿನ ಪಾಳು ಬಿದ್ದಿದ್ದ ದೈವಸ್ಥಾನ ಪತ್ತೆಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ.
ಈ ದೈವಸ್ಥಾನ ಪತ್ತೆ ಆಗಿರೋದು ದಕ್ಷಿಣ ಕನ್ನಡ ಪೆರ್ನೆ ಗ್ರಾಮದ ಕೊರತ್ತಿಕಟ್ಟೆ ಪ್ರದೇಶದಲ್ಲಿ. ಪೆರ್ನೆ ಗ್ರಾಮಸ್ಥರು ನಿರಂತರವಾಗಿ ಸಂಕಷ್ಟ ಎದುರಿಸುತ್ತಿದ್ದರು. ಅಸಹಜ ಸಾವು, ನೋವುಗಳಿಂದ ಆತಂಕಗೊಂಡಿದ್ದರು. ಇದರಿಂದ ಜ್ಯೋತಿಷಿಗಳ ಮೊರೆ ಹೋಗಿದ್ದರು. ಆ ಜ್ಯೋತಿಷಿ ಹೇಳಿದಂತೆ ಗ್ರಾಮಸ್ಥರು ಭೂಮಿ ಅಗೆದಾಗ ಮೂರು ದೈವಗಳ ಮುಖಗಳು, ದೀಪ ಇನ್ನಿತರ ವಸ್ತುಗಳು ಪತ್ತೆಯಾಗಿದ್ದು, ಅದು 500 ವರ್ಷದ ಹಿಂದಿನ ದೈವಸ್ಥಾನ ಅಂತ ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here