Saturday, October 1, 2022
Powertv Logo
Homeಕ್ರೈಂಮಾದಕವಸ್ತು ವ್ಯಾಪಾರಿ ಆರೋಪಿಯ ಮೇಲೆ ಅಸ್ಸಾಂ ಪೊಲೀಸ್ ಗುಂಡು

ಮಾದಕವಸ್ತು ವ್ಯಾಪಾರಿ ಆರೋಪಿಯ ಮೇಲೆ ಅಸ್ಸಾಂ ಪೊಲೀಸ್ ಗುಂಡು

ಕೊಕ್ರಜಾರ್ (ಅಸ್ಸಾಂ): ಕೊಕ್ರಜಾರ್ ಜಿಲ್ಲೆಯಲ್ಲಿ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಶಂಕಿತ ಮಾದಕವಸ್ತು ವ್ಯಾಪಾರಿಯೊಬ್ಬನ ಮೆಲೆ ಅಸ್ಸಾಂ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಹಿರಿಯ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ. ಮಾದಕ ದ್ರವ್ಯಗಳನ್ನು ಅಡಗಿಸಿಟ್ಟಿರುವ ಸ್ಥಳವನ್ನು ತೋರಿಸಲು ಸೋಮವಾರ ರಾತ್ರಿ ಶಂಕಿತನನ್ನು ಸೆರ್ಫಂಗುರಿ ಪ್ರದೇಶಕ್ಕೆ ಕರೆದೊಯ್ಯುವಾಗ ಈ ಘಟನೆ ಸಂಭವಿಸಿದೆ.

ಸೋಮವಾರ ಶ್ರೀರಾಂಪುರದಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಆತನಿಂದ ಸುಮಾರು 1.50 ಲಕ್ಷ ಮೌಲ್ಯದ 790 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆಯ ಸಮಯದಲ್ಲಿ ಆರೋಪಿ ಸೆರ್ಫಂಗುರಿ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಗಾಂಜಾ ಬಚ್ಚಿಟ್ಟಿದ್ದೇನೆ ಎಂದು ಹೇಳಿದ್ದರಿಂದ ಅವರನ್ನು ಅಲ್ಲಿಗೆ ಕರೆದೊಯ್ಯುತ್ತಿದ್ದರು.

- Advertisment -

Most Popular

Recent Comments