ಮೌಂಟ್ ಮೌಂಗನಿ : ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ನಿನ್ನೆ ನ್ಯೂಜಿಲೆಂಡ್ ವಿರುದ್ಧ ನಡೆದ 5ನೇ ಹಾಗೂ ಕೊನೆಯ ಟಿ20ಯಲ್ಲಿ ಎರಡು ವಿನೂತನ ದಾಖಲೆಗಳನ್ನು ಬರೆದಿದ್ದಾರೆ.
ಸರಣಿಯ ಮೊದಲ ನಾಲ್ಕು ಮ್ಯಾಚ್ಗಳಲ್ಲಿ ಹೇಳಿಕೊಳ್ಳುವಂಥಾ ಪ್ರದರ್ಶನ ನೀಡಿರದ ಬುಮ್ರಾ 5ನೇ ಮ್ಯಾಚಲ್ಲಿ ಗೆಲುವಿನಲ್ಲಿ ಪ್ರಮುಖಪಾತ್ರವಹಿಸಿ, ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ್ರು. ಅಲ್ಲದೆ ಈ ಮ್ಯಾಚಲ್ಲಿ ಬುಮ್ರಾ ಎರಡು ದಾಖಲೆಗಳನ್ನು ಕೂಡ ನಿರ್ಮಿಸಿದ್ರು.
ತಾವು ಬೌಲಿಂಗ್ ಮಾಡಿದ್ದ ಮೊದಲ ಓವರ್ನಲ್ಲೇ ವಿಕೆಟ್ ಪಡೆದು ಮೇಡನ್ ಮಾ ಡಿದ ಜಸ್ಪ್ರೀತ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಮೇಡನ್ ಓವರ್ ಮಾಡಿರುವ ಬೌಲರ್ ಎಂಬ ಕೀರ್ತಿಗೆ ಪಾತ್ರರಾದ್ರು.
ಅಂತರಾಷ್ಟ್ರೀಯ ಟಿ20ಯಲ್ಲಿ ಬುಮ್ರಾ ಒಟ್ಟು 178.1 ಓವರ್ ಬೌಲಿಂಗ್ ಮಾಡಿದ್ದು, ಅದರಲ್ಲಿ 7 ಓವರ್ಗಳನ್ನು ಮೇಡನ್ ಮಾಡುವ ಮೂಲಕ ಶ್ರೀಲಂಕಾದ ನುವಾನ್ ಕುಲಶೇಖರ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. 205.1 ಓವರ್ ಬೌಲಿಂಗ್ ಮಾಡಿರುವ ನುವಾನ್ ಕುಲಶೇಖರ 6 ಮೇಡನ್ ಓವರ್ಗಳಲ್ಲಿ ರನ್ ಬಿಟ್ಟುಕೊಟ್ಟಿಲ್ಲ..!
ಈ ದಾಖಲೆ ಜೊತೆಯಲ್ಲಿ ಬುಮ್ರಾ ನಿನ್ನೆ ತನ್ನ 50ನೇ ಅಂತರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದಾರೆ. ಎಂ.ಎಸ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾರತದ ಪರ ಈ ಸಾಧನೆ ಮಾಡಿದ ಇತರರಾಗಿದ್ದಾರೆ.
buy zithromax 250 mg online
zithromax z-pak 250 mg oral tablet