Homeರಾಜ್ಯಬೆಂಗಳೂರುಬಿ ರಿಪೋರ್ಟ್​ ಹಾಕಲು 5 ಲಕ್ಷ ಲಂಚ ಪಡೆದ ಎಎಸ್​ಐ ದಯಾನಂದಸ್ವಾಮಿ..!

ಬಿ ರಿಪೋರ್ಟ್​ ಹಾಕಲು 5 ಲಕ್ಷ ಲಂಚ ಪಡೆದ ಎಎಸ್​ಐ ದಯಾನಂದಸ್ವಾಮಿ..!

ಬೆಂಗಳೂರು : ಪ್ರಕರಣವೊಂದರ ಬಿ ರಿಪೋರ್ಟ್ ಮಾಡಲು ಎಎಸ್ ಐ ದಯಾನಂದ 5 ಲಕ್ಷ ಹಣ ಲಂಚ ಪಡೆದಿದ್ದಾರೆ. ಡಿಸಿಪಿ ಕಚೇರಿಯಲ್ಲಿ ASI ದಯಾನಂದಸ್ವಾಮಿ ಕೆಲಸ ಮಾಡುತ್ತಿದ್ದರು. ಚಿಕ್ಕ ಬೊಮ್ಮಸಂದ್ರ ಬಳಿ ಸರ್ವೆ ನಂಬರ್ 16/1ರಲ್ಲಿನ 3 ಸೈಟ್​ ವಿಚಾರದಲ್ಲಿ ವಿವಾದ  ನಡೆದಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸೈಟ್ ಪಡೆಯುತ್ತಿದ್ದಾರೆಂಬ ಆರೋಪದ ವಂಚನೆಯಲ್ಲಿ ಉದ್ಯಮಿ ಭರತ್ ಶೆಟ್ಟಿ ವಿರುದ್ಧ ಕೊಡಿಗೇಹಳ್ಳಿಯಲ್ಲಿ ಕೇಸ್ ದಾಖಲಾಗಿತ್ತು. ASI ದಯಾನಂದಸ್ವಾಮಿ ಬಿ ರಿಪೋರ್ಟ್ ಮಾಡಿಕೊಡುವುದಾಗಿ ಉದ್ಯಮಿ ಭರತ್ ಶೆಟ್ಟಿಯಿಂದ 5 ಲಕ್ಷ ಹಣ ಲಂಚವನ್ನು ಪಡೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಉದ್ಯಮಿ ಭರತ್ ಶೆಟ್ಟಿ ASI ದಯಾನಂದಸ್ವಾಮಿ ವಿರುದ್ಧ ಪೊಲೀಸ್ ಕಮಿಷನರ್, ಎಸಿಬಿಗೆ ದೂರು ನೀಡಿ ಎರಡು ದಿನ ಆದರೂ ಎಎಸ್ ಐ ವಿರುದ್ಧ ಅಧಿಕಾರಿಗಳು. ಕ್ರಮ ಕೈಗೊಂಡಿಲ್ಲ.

LEAVE A REPLY

Please enter your comment!
Please enter your name here

- Advertisment -

Most Popular

Recent Comments