ಮೈಸುರು ; ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು .ಸಾಂಸ್ಕೃತಿಕ ನಗರಯ ಜನ ಆತಂಕಕ್ಕೆ ಸಿಲುಕಿದ್ದಾರೆ.ಇದರ ಮಧ್ಯೆ ಬಂದ ಆಷಾಢ ಶುಕ್ರವಾರದ ಮೇಲೆ ಕೊರೊನಾದಕರುನೆರಳು ಬಿದ್ದಿದೆ.ಆಷಾಢ ಶುಕ್ರವಾರಗಳಲ್ಲಿ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಅದ್ದೂರಿ ಆಚರಣೆಗೆ ಸರ್ಕಾರ ಬ್ರೇಕ್ ಹಾಕಿದೆ. ಮೊದಲ ಶುಕ್ರವಾರದಂತೆ ಎರಡನೇ ಆಷಾಢ ಶುಕ್ರವಾರವೂ ಇಂದು ಚಾಮುಂಡಿ ಬೆಟ್ಟದಲ್ಲಿ ಪೂಜಾ ಕೈಕರ್ಯಗಳು ಸರಳವಾಗಿ ನಡೆದಿದೆ.
ಪೂಜೆ ನಂತರ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಬೀಗ ಹಾಕಲಾಗಿದೆ. ಎರಡನೇ ಆಷಾಢ ಶುಕ್ರವಾರವಾದುವಿಂದು ನಿತ್ಯ ಪೂಜೆ ಮಾತ್ರ ಸೀಮಿತವಾಗಿದೆ.ಮುಂಜಾನೆ ಅಭಿಷೇಕ ನಂತರ ಪೂಜೆ ನೆರವೇರಿಸಲಾಗಿದ್ದು.ಪ್ರಧಾನ ಅರ್ಚಕರಾದ ಡಾ.ಶಶೀಶೇಖರ್ ದೀಕ್ಷೀತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ಗಳು ನಡೆದಿದೆ.
ಕೊರೊನಾ ಹಿನ್ನಲೆ ಸಾರ್ವಜನಿಕರ ಪ್ರವೇಶ ಕ್ಕೆ ನಿಷೇಧ ಹೇರಲಾಗಿದೆ. ಪ್ರತಿ ವರ್ಷ ಆಷಾಢ ಶುಕ್ರವಾರಗಳಲ್ಲಿ ಬೆಳಿಗ್ಗೆ 5.30 ರಿಂದ ರಾತ್ರಿ 10 ರವರೆಗೆ ದರ್ಶನಕ್ಕೆ ಅವಕಾಶ ಇರುತ್ತಿತ್ತು.ಕೊರೊನಾ ಹಿನ್ನಲೆ ಇಂದು ಬೆಳಗ್ಗೆ 7.30ಕ್ಕೆ ಧಾರ್ಮಿಕ ವಿಧಿವಿಧಾನ ಮುಗಿಸಿ ಬೀಗ ಹಾಕಲಾಯಿತು.