ಶಿವಮೊಗ್ಗ: ಅರಣ್ಯ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆಯಿಂದಾಗಿ ಭಾರೀ ಪ್ರಮಾಣದ ದಂತ ವಶಪಡಿಸಿಕೊಳ್ಳಲಾಗಿದ್ದು, ಅಂತರ್ ರಾಜ್ಯ ಸ್ಮಗ್ಲರ್’ಗಳನ್ನು ಬಂಧಿಸಲಾಗಿದೆ. ಹೊನ್ನಾವರದ ಮುಜಾಫರ್, ಕುಮಟಾ ಮೂಲದ ಮೊಹಮ್ಮದ್ ಡ್ಯಾನಿಶ್ ಮತ್ತು ಸೊರಬ ಮೂಲದ ಜಹೀರ್ ಬಂಧಿತರು.
ಮಹತ್ವದ ಬೆಳವಣಿಗೆಯೊಂದರಲ್ಲಿ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭಾರೀ ಪ್ರಮಾಣದ ಅಕ್ರಮ ಸಾಗಾಣಿಕಾ ದಂತವನ್ನು ವಶಕ್ಕೆ ಪಡೆದು, ಅಂತರ್ ರಾಜ್ಯ ಕಳ್ಳಸಾಗಾಣಿಕೆದಾರರನ್ನು ಬಂಧಿಸಿದೆ. ಎಸಿಎಫ್ ಬಾಲಚಂದ್ರ ಮತ್ತು ಡಿಆರ್ಎಫ್ಓ ರೇವಣ್ಣಸಿದ್ದಯ್ಯ ಹಿರೇಮಠ್ ನೇತೃತ್ವದ ಅರಣ್ಯ ಜಾಗೃತ ದಳವು ಸೊರಬದಲ್ಲಿ ಮೂರು ಅಂತರ್ ರಾಜ್ಯ ಕಳ್ಳಸಾಗಾಣಿಕೆದಾರರನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಹಿಪೊಪಾಟಮಸ್ ದಂತಗಳು ಮತ್ತು ದೇಹದ ಭಾಗಗಳನ್ನು ವಶಪಡಿಸಿಕೊಂಡಿದೆ.