Homeರಾಜ್ಯಬೆಂಗಳೂರುಬೈಕ್ ಹಾಗೂ ಮನೆಗಳ್ಳತನ‌ ಮಾಡುತ್ತಿದ್ದ ಆರೋಪಿಯ ಬಂಧನ

ಬೈಕ್ ಹಾಗೂ ಮನೆಗಳ್ಳತನ‌ ಮಾಡುತ್ತಿದ್ದ ಆರೋಪಿಯ ಬಂಧನ

ವಿಜಯಪುರ: ಮನೆಗಳ್ಳತನ ಹಾಗೂ ಬೈಕ್​ಗಳನ್ನು ಕದಿಯುತ್ತಿದ್ದ ಯುವಕನೊಬ್ಬನನ್ನು‌ ವಿಜಯಪುರ ಪೋಲಿಸರು ಬಂಧಿಸಿ ಆತನಿಂದ ಬರೋಬ್ಬರಿ 95 ಗ್ರಾಂ ತೂಕದ  ಚಿನ್ನಾಭರಣ, 270 ಗ್ರಾಂ ಬೆಳ್ಳಿ ಆಭರಣ ಸೇರಿ 5,09,500 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ಬಾಗಲಕೋಟೆಯ ನವನಗರದ ನಿವಾಸಿ ಗಣೇಶ ಸುಭಾಷ  ಪವಾರ (19) ಎಂದು ಗುರುತಿಸಲಾಗಿದೆ. ಸದ್ಯ ವಿಜಯಪುರದ ಗಾಂಧಿ ಚೌಕ್​ದ  ಸ್ಟಾರ್ ಚೌಕ್​ದ ಶೆಡ್​ನಲ್ಲಿ ಈತ ವಾಸವಿದ್ದನು. ಹಗಲು ಹೊತ್ತು ಕಾರ್ಮಿಕನಾಗಿ ಕೆಲಸ ಮಾಡುತ್ತಾ. ರಾತ್ರಿ ಬೀಗ ಹಾಕಿದ ಮನೆಗಳನ್ನು ಕಳ್ಳತನ ಮಾಡುತ್ತಿದ್ದನು. ಹಾಗೂ ಮನೆ ಹೊರಗಡೆ ನಿಲ್ಲಿಸಿದ್ದ ಬೈಕ್ ಸಹ ಕಳ್ಳತನ ಮಾಡುತ್ತಿದ್ದನು.ಈತನ ಬಂಧನದಿಂದ ರಹೀಮ್ ನಗರ ಹಾಗೂ ಮದಿನಾ ನಗರದಲ್ಲಿ‌ ನಡೆದ ಮನೆಗಳ್ಳತನ ಬಯಲಿಗೆ ಬಂದಿದೆ. ಆರೋಪಿಯನ್ನುಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಗೆ ಎಸ್ ಪಿ ಅನುಪಮ್ ಅಗರವಾಲ್ ಬಹುಮಾನ ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments