ಅರೆಸ್ಟ್ ಆಗೋ ಭೀತಿಯಲ್ಲಿ ಸರ್ಜಾ..! ಶ್ರುತಿ ನೀಡಿದ ಕಂಪ್ಲೇಂಟ್ ನಲ್ಲಿ ಏನೇನಿದೆ ಅಂದ್ರೆ..?

0
171

ನಟ ಅರ್ಜುನ್ ಸರ್ಜಾ ಹಾಗೂ ನಟಿ ಶ್ರುತಿ ಹರಿಹರನ್ ನಡುವಿನ #MeToo ಕ್ಷಣಕ್ಕೊಂದು ಟ್ವಿಸ್ಟ್ ಪಡೀತಾ ಇದೆ. ಅರ್ಜುನ್ ಸರ್ಜಾ ಶ್ರುತಿ ವಿರುದ್ಧ ಕಂಪ್ಲೇಂಟ್ ಮಾಡಿದ್ದು, ಮಾನನಷ್ಟ ಮೊಕದ್ದಮೆ ಹೂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಶ್ರುತಿಗೆ ಸೂಚಿಸಿದ್ದು ಹಳೇ ವಿಷ್ಯ. ಇದೀಗ ಶ್ರುತಿ ಅರ್ಜುನ್ ಸರ್ಜಾ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ. ಶ್ರುತಿ ನೀಡಿರೋ ಕಂಪ್ಲೇಂಟ್ ನಲ್ಲಿ ಸಾಕಷ್ಟು ವಿಷ್ಯಗಳಿದ್ದು, ಅರ್ಜುನ್ ಸರ್ಜಾ ಅರೆಸ್ಟ್ ಆಗೋ ಭೀತಿಯಲ್ಲಿದ್ದಾರೆ.‌ ಶ್ರುತಿ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಟ್ಟಿದ್ದಾರೆ. “ಅರ್ಜುನ್ ಸರ್ಜಾ ನನ್ ಮೊಬೈಲ್ ಗೆ ಬಹಳ ಸಲ ಮೆಸೇಜ್ ಮಾಡಿದ್ದಾರೆ.‌ನಂಗೆ ಒಬ್ಬಂಟಿ ಆಗಿ ರೆಸಾರ್ಟ್ ಗೆ ಬರೋಕೆ ಹೇಳಿದ್ರು‌.‌ ಇದ್ರ ಹಿಂದಿನ ಉದ್ದೇಶ ಏನು? ರಿಹರ್ಸಲ್ ಮಾಡುವಾಗ ಹಲವು ಬಾರಿ ನನ್ನ ತಬ್ಕೊಂಡಿದ್ರು. ಸುಮಾರು ಸಲ ನಂಗೆ ಮುತ್ತು ಕೊಟ್ರು. ನಾನು ಎಷ್ಟೇ ಪ್ರತಿರೋಧಿಸಿದ್ರೂ ನನ್ನ ಹಿಂಬದಿ ಬಂದು ಮುಟ್ಟುತ್ತಿದ್ರು. ಊಟಕ್ಕಾಗಿ ನನ್ನ ಪದೇ ಪದೇ ಯುಬಿ ಸಿಟಿಗೆ ಕರೀತಿದ್ರು.‌ ಸಹಜವಾಗಿ ಕಾಮತೃಷೆ ತೀರಿಸಿಕೊಳ್ಳಲೆಂದೇ ನನ್ನ ರೆಸಾರ್ಟ್ ಗೆ ಕರೆದಿದ್ರು” ಅಂತ ಶ್ರುತಿ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ಇದ್ರಿಂದ ಅರ್ಜುನ್ ಸರ್ಜಾ ಬಂಧನದ ಭೀತಿಯಲ್ಲಿದ್ದಾರೆ.

LEAVE A REPLY

Please enter your comment!
Please enter your name here