Monday, May 23, 2022
Powertv Logo
Homeಈ ಕ್ಷಣಮರ್ಜ್ ಆಗುತ್ತವಾ KSRTC, BMTC, ಈಶಾನ್ಯ, ವಾಯುವ್ಯ ಸಾರಿಗೆ ನಿಗಮಗಳು..?

ಮರ್ಜ್ ಆಗುತ್ತವಾ KSRTC, BMTC, ಈಶಾನ್ಯ, ವಾಯುವ್ಯ ಸಾರಿಗೆ ನಿಗಮಗಳು..?

ರಾಜ್ಯಾದ್ಯಂತ ಇರುವ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್ಆರ್ಟಿಸಿ, ಬಿಎಂಟಿಸಿ,ಈಶಾನ್ಯ ಕರ್ನಾಟಕ ಸಾರಿಗೆ, ವಾಯುವ್ಯ ಸಾರಿಗೆ ನಿಗಮಗಳನ್ನ ಸೇರಿಸಿ ಒಂದೇ ನಿಗಮ ಮಾಡುವಂತೆ ಒತ್ತಾಯ ಕೇಳಿಬಂದಿದೆ.‌ ಐಎಎಸ್‌ ಅಧಿಕಾರಿ ಎಂ.ಆರ್.ಶ್ರೀನಿವಾಸ್ ಮೂರ್ತಿ ನೇತೃತ್ವದ ಒನ್ ಮ್ಯಾನ್ ಕಮಿಟಿಯಾದ ಸಾರಿಗೆ ನಿಗಮಗಳ‌ ಪುನರಚನಾ ಸಮಿತಿಗೆ, ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್‌ನ ಅಧ್ಯಕ್ಷ ಅನಂತ ಸುಬ್ಬರಾವ್ ಸಲಹೆ ನೀಡಿದ್ದಾರೆ.

ಕೊರೋನಾ ಬಂದಾಗಿಂದ ಸಾರಿಗೆ ನಿಗಮಗಳ‌ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ.ಬಸ್‌ಗಳ‌ ನಿರ್ವಹಣೆ, ಡಿಪೋಗಳ ಖರ್ಚು ವೆಚ್ಚ, ನೌಕರರ ಸಂಬಳಕ್ಕೂ ಹಣವಿಲ್ಲದೆ ನಿಗಮಗಳು ಪರದಾಡುತ್ತಿವೆ.‌ 1961ರಲ್ಲಿ ಆರಂಭವಾಗಿದ್ದ ಕೆಎಸ್ಆರ್ಟಿಸಿ 1997ರಲ್ಲಿ ನಾಲ್ಕು‌ ನಿಗಮಗಳಾಗಿ ವಿಂಗಡಣೆಯಾಗಿದ್ದವು. ಪರಿಣಾಮ ಇಲ್ಲಿಯವರೆಗೂ 4500 ಕೋಟಿ ನಷ್ಟವಾಗಿದೆ.‌ ಪಿಎಫ್, ಎಲ್‌ಐಸಿ, ನಿವೃತ್ತಿ ವೇತನ ಸೇರಿ 1700 ಕೋಟಿ ನೌಕರರಿಗೆ ಬಾಕಿ ಉಳಿಸಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ನಾಲ್ಕು ನಿಮಗಳನ್ನೂ ವಿಲೀನಗೊಳಿಸಿದರೆ ಆಡಳಿತ ವಿಭಾಗದ ನಷ್ಟ ಸೇರಿದಂತೆ ಹಲವು ನಷ್ಟ ತಪ್ಪಿಸಬಹುದು.ಜೊತೆಗೆ ನಿಗಮದ ಅಭಿವೃದ್ಧಿ ಸೇರಿದಂತೆ ಸಾರ್ವಜನಿಕರಿಗೆ ಉತ್ತಮ‌‌‌ ಸೇವೆ ನೀಡಬಹುದು. ಹೀಗಾಗಿ ಸಾರಿಗೆ ನಿಗಮಗಳ‌‌ ಕೇಂದ್ರಿಕರಣ ಮಾಡಿ ಎಂದು ಕಮಿಟಿಗೆ ವರ್ಕರ್ಸ್ ಫೆಡರೇಷನ್‌ ಸಲಹೆ ನೀಡಿದೆ.‌

ಮೊದಲ ಬಾರಿಗೆ ಕೆಎಸ್ಆರ್ಟಿಸಿ 1997ರಲ್ಲಿ ವೀಕೆಂದ್ರಿಕರಣ ಆಗುವಾಗಲೂ ಪ್ರತ್ಯೇಕ ನಿಗಮ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.‌ಸದ್ಯ ಆರ್ಥಿಕ ಸಂಕಷ್ಟದಿಂದ‌ ಮತ್ತೆ ಈ ಸಲಹೆ ನೀಡಿದೆ.ಈ ಸಂಬಂಧ ಪ್ರತಿಕ್ರಿಯಿಸಿರುವ ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ್, ನಷ್ಟ ತಪ್ಪಿಸಲು ಫೆಡರೇಷನ್‌ಗಳನ್ನು ಮರ್ಜ್ ಮಾಡುವಂತೆ ಕಮಿಟಿಗೆ ಸಲಹೆ ನೀಡಿವೆ.‌ಕೇಂದ್ರೀಕರಣ ವೀಕೆಂದ್ರಿಕರಣದ ಅನುಕೂಲ‌ ಹಾಗೂ ಅನಾನುಕೂಲದ ಬಗ್ಗೆ ಚರ್ಚೆ ಮಾಡಬೇಕಿದೆ. ಈ ಸಂಬಂಧ ಸಮಿತಿ ಸರ್ಕಾರಕ್ಕೆ ವರದಿ‌ ನೀಡಲಿದ್ದು, ಇದು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಲಿದೆ.ಎಲ್ಲಾ ನಿಗಮಗಳನ್ನ ಒಂದಾಗಿ ಮಜ್೯ ಮಾಡೋದ್ರಿಂದ ದುಂದು ವೆಚ್ಚ ಉಳಿಯಲಿದೆ ಅಂತ ನಾಗರಿಕರು ಕೂಡಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಆರ್ಥಿಕ ನಷ್ಟದಲ್ಲಿರುವ ನಿಗಮಗಳ ಅಭಿವೃದ್ಧಿಗೆ ಮರ್ಜ್ ಎಂಬ ಸಲಹೆಯನ್ನ ನೀಡಲಾಗಿದೆ. ಈ ಸಂಬಂಧ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.‌

- Advertisment -

Most Popular

Recent Comments