Home ರಾಜ್ಯ ಬೆಂಗಳೂರು 450 ವರ್ಷಗಳ ಬಳಿಕ ಹಂಪಿಯ ಬಡವಿಲಿಂಗ ಪೂಜೆ ಪುನಾರಂಭಿಸಿದ್ದ ಅರ್ಚಕ ಕೃಷ್ಣಾಭಟ್ಟರು ದೈವಾಧೀನ !

450 ವರ್ಷಗಳ ಬಳಿಕ ಹಂಪಿಯ ಬಡವಿಲಿಂಗ ಪೂಜೆ ಪುನಾರಂಭಿಸಿದ್ದ ಅರ್ಚಕ ಕೃಷ್ಣಾಭಟ್ಟರು ದೈವಾಧೀನ !

ವಿಜಯನಗರ : ವಿಶ್ವಪ್ರಸಿದ್ಧ ಹಂಪಿಯ ಬಡವಿಲಿಂಗ ದೇವರ ಅರ್ಚಕ ಕೃಷ್ಣಾ ಬಟ್ಟರು ದೈವಾಧೀನರಾಗಿದ್ದಾರೆ. ಹಂಪಿಯ ಬಡವಿಲಿಂಗ ಅತ್ಯಂತ ಅಪರೂಪದ ಮತ್ತು ಪೌರಾಣಿಕ ಹಿನ್ನೆಲೆಯ ಶಿವಲಿಂಗವಾಗಿದೆ. ತೆರೆದ ದೇವಾಲಯದ ಆವರಣದಲ್ಲಿ 3 ಮೀಟರ್ ಎತ್ತರದ ಶಿವಲಿಂಗವಿದೆ. ಈ ಶಿವಲಿಂಗವನ್ನು ಕಳೆದ ನಾಲ್ಕು ದಶಕಗಳಿಂದ ಕೃಷ್ಣಾಭಟ್ಟರು ಪೂಜೆ ಪುನಸ್ಕಾರಗಳಿಂದ ಶೋಭಾಯಮಾನಗೊಳಿಸಿದ್ದರು. ಈ ಲಿಂಗವು 450 ವರ್ಷಗಳ ಕಾಲ ಪೂಜೆ ಇಲ್ಲದೇ ತಿರಸ್ಕೃತಗೊಂಡಿತ್ತು. ಉಡುಪಿಯ ಕೋಟ ಊರಿನವರು ಎನ್ನಲಾಗಿರುವ ಕೃಷ್ಣ ಬಟ್ಟರು ಬಡವಿಲಿಂಗಕ್ಕೆ ಪೂಜೆ ಪುನಾರಂಭಿಸಿದರು..ಬಡವಿಲಿಂಗ ದೇವರ ಅರ್ಚಕರಾಗಿ ನಾಲ್ಕು ದಶಕಗಳ ಕಾಲ ಸೇವೆ ಮಾಡಿದ್ದಾರೆ…ಮೂರು ಮೀಟರ್ ಎತ್ತರದ ಶಿವಲಿಂಗವನ್ನ ಕೃಶಕಾಯದ ಕೃಷ್ಣಾಭಟ್ಟರು ಒಬ್ಬರೇ ಏರಿ ದಿನವೂ ಶುಭ್ರಗೊಳಿಸಿತ್ತಿದ್ದರು…450 ವರ್ಷಗಳ ಕಾಲ ಪೂಜೆ ಇಲ್ಲದೆ ನಿರ್ಲಕ್ಷ್ಯ ಕ್ಕೆ ಒಳಗಾಗಿದ್ದ ಏಕಶಿಲಾ ಮೂರ್ತಿ ಬಡವಿಶಿವಲಿಂಗಕ್ಕೆ ಪೂಜೆ ಪ್ರಾರಂಭಿಸಿದವರು ಕೃಷ್ಣಾಬಟ್ಟರುತೆರೆದ ಸಣ್ಣ ಕೋಣೆಯಲ್ಲಿ ಬೃಹದಾಕಾರದ ಶಿವಲಿಂಗವನ್ನು ಕೃಷ್ಣಾ ಭಟ್ಟರು ನಿತ್ಯವೂ ಪೂಜಿಸ್ತಿದ್ರು..ಮಳೆ ಬಂದಾಗ ಪ್ರಾಂಗಣದಲ್ಲಿ ತುಂಬಿ ಹೋಗ್ತಿದ್ದ ಕೆಸರನ್ನು ಒಬ್ಬರೇ ಸ್ವಚ್ಛಗೊಳಿಸ್ತಿದ್ರು..ಎಲ್ಲಿಯ ಕೋಟ ಎಲ್ಲಿಯ ಹಂಪಿ.,? ಶಿವನ ಆಜ್ಞೆಗೆ ನಾನಿಲ್ಲಿ ಪೂಜೆಗೆ ನಿಯುಕ್ತ ಗೊಂಡಿದ್ದೇನೆ ಅಂತ ಕೃಷ್ಣಾ ಭಟ್ಟರು ಹೇಳಿಕೊಳ್ಳುತ್ತಿದ್ದರು..
ಕೃಷ್ಣಾಭಟ್ಟರು ಹಂಪಿಯ ಪರಿಸರದಲ್ಲಿ ಎಲ್ಲರಿಗೂ ಅಪ್ಯಾಯಮಾನರಾಗಿದ್ದರು.. ಇಂದು ಅವರು ದೈವಾಧಿನರಾಗಿದ್ದು..ಗಣ್ಯರು, ಸಾರ್ವಜನಿಕರು ತೀವ್ರ ಸಂತಾಪ ಮಿಡಿದಿದ್ದಾರೆ
ಅರುಣ್ ನವಲಿ 

LEAVE A REPLY

Please enter your comment!
Please enter your name here

- Advertisment -

Most Popular

ಧನ್ವಂತರಿ ಹೋಮದ ಮೊರೆ ಹೋದ ಸಚಿವ ಈಶ್ವರಪ್ಪ..!

ಶಿವಮೊಗ್ಗ : ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಶೀಘ್ರದಲ್ಲೇ ಇಳಿಮುಖ ಕಾಣಲಿ ಎಂದು ಸಚಿವ ಈಶ್ವರಪ್ಪ, ಹೋಮದ ಮೊರೆ ಹೋಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೆ, ಏರಿಳಿತ ಕಾಣುತ್ತಿರುವ ಹಿನ್ನೆಲೆಯಲ್ಲಿ,...

ಕೊಪ್ಪಳದಲ್ಲಿ ಒಂದು ಬ್ಲಾಕ್ ಫಂಗಸ್ ಕೇಸ್ ಪತ್ತೆ..!

ಕೊಪ್ಪಳ: ಕೊರೊನಾ ಎರಡನೇ ಅಲೆ ತೀವ್ರವಾಗಿ ಪ್ರಸರಣವಾಗುತ್ತಿರುವ ಈ ಸಂದರ್ಭದಲ್ಲಿ ಮತ್ತೊಂದು ಆತಂಕ ಎದುರಾಗಿದ್ದು, ಬ್ಲ್ಯಾಕ್​ ಫಂಗಸ್​ ಹರಡುವಿಕೆ ಬಗ್ಗೆ ಭಯ ಶುರುವಾಗಿದೆ. ಹೀಗಿರುವಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಬ್ಲ್ಯಾಕ್​ ಫಂಗಸ್ ಕಾಣಿಸಿಕೊಂಡಿದೆ ಎಂದು...

‘ತೌಕ್ತೆ’ ಅವಾಂತರಕ್ಕೆ ಕತ್ತಲಲ್ಲಿ ಉತ್ತರಕನ್ನಡ ಬೆಳಕು ನೀಡಲು ಹೆಸ್ಕಾಂ ಸಿಬ್ಬಂದಿಗಳಿಂದ ಸಾಹಸ..!

ಕಾರವಾರ : ತೌಕ್ತೆ ಚಂಡಮಾರುತ ಸೃಷ್ಟಿಸಿದ ಅವಾಂತರ ಒಂದೆರೆಡಲ್ಲ. ಒಂದೆಡೆ ಕಡಲು ಉಕ್ಕೇರಿ ಕಡಲತೀರದ ಮಂದಿ ಸಂಕಷ್ಟಕ್ಕೆ ಸಿಲುಕಿದ್ದರೇ ಇನ್ನೊಂದೆಡೆ ಎಲ್ಲೆಡೆ ಮರಗಿಡಗಳು ಉರುಳಿ ವಿದ್ಯುತ್ ಕಂಬಗಳು ಬುಡಮೇಲಾಗಿವೆ. ಪರಿಣಾಮ ಉತ್ತರಕನ್ನಡ ಜಿಲ್ಲೆಯ...

‘ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸುವಲ್ಲಿ ವೈದ್ಯರ ತಂಡ ಯಶಸ್ವಿ’

ಶಿವಮೊಗ್ಗ: ಪ್ರಾಣದ ಹಂಗನ್ನೂ ಲೆಕ್ಕಿಸದೇ ಸೊರಬ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಕೋರೋನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಿಗೆ ಮೂರನೇ ಹೆರಿಗೆ ಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ....

Recent Comments