Homeಸಿನಿ ಪವರ್ಟಾಲಿವುಡ್ಸ್ಯಾಂಡಲ್​ವುಡ್​ನಲ್ಲಿ ರಿಜೆಕ್ಟ್ ಆಗಿದ್ದ ಟಾಲಿವುಡ್ ಟಾಪ್ ನಟಿ!

ಸ್ಯಾಂಡಲ್​ವುಡ್​ನಲ್ಲಿ ರಿಜೆಕ್ಟ್ ಆಗಿದ್ದ ಟಾಲಿವುಡ್ ಟಾಪ್ ನಟಿ!

ಅನುಷ್ಕಾ ಶೆಟ್ಟಿ, ಅಪ್ಪಟ ಕನ್ನಡತಿ. ಇವ್ರು ಟಾಲಿವುಡ್ ನ ಟಾಪ್ ಹೀರೋಯಿನ್ ಗಳಲ್ಲೊಬ್ರು. ಸಿಕ್ಕಾಪಟ್ಟೆ ಬೇಡಿಕೆ ಇರೋ ನಟಿ. ಕೆಲವರಿಗೆ ಈ ವಿಷ್ಯ ಈಗಾಗ್ಲೇ ಗೊತ್ತಿರ್ಬಹುದು. ಕೆಲವರಿಗೆ ಗೊತ್ತಿರ್ಲಿಕ್ಕಿಲ್ಲ? ಏನಪ್ಪ ಅಂದ್ರೆ ಇವರು ಸ್ಯಾಂಡಲ್ ವುಡ್ ನಿಂದ ರಿಜೆಕ್ಟ್ ಆಗಿದ್ದವರು!

ಹೌದು, ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಅನುಷ್ಕಾ ಇಂದು ಸ್ಯಾಂಡಲ್ ವುಡ್ ನ ಟಾಪ್ ಹೀರೋಯಿನ್ ಆಗಿರ್ತಿದ್ರೇನೋ? ಅನುಷ್ಕಾ ನಮ್ ಮಂಗಳೂರ ಚೆಲುವೆ. ಇದು ಯಾರ್ಗೂ ಗೊತ್ತಿಲ್ದೇ ಇರೋ ವಿಷ್ಯ ಅಲ್ಲ. 

ಅನುಷ್ಕಾಗೆ ಕಾಲೇಜು ಡೇಸ್ ನಲ್ಲೇ ಸ್ಯಾಂಡಲ್ ವುಡ್ ನಿಂದ ಅವಕಾಶ ಬಂದಿತ್ತಂತೆ. ಕಾಲೇಜಿಗೆ ಹೋಗುವಾಗ, ಎಲ್ಲಾದ್ರು ಶೂಟಿಂಗ್ ನಡೀತಾ ಇದೆ ಅಂತ ಗೊತ್ತಾದ್ರೆ ಸ್ಪಾಟ್ ಗೆ ಹೋಗಿ, ಶೂಟಿಂಗ್ ನೋಡ್ತಾ ನಿತ್ಕೋತ್ತಿದ್ರಂತೆ. ಹೀಗೆ ಒಂದ್ ದಿನ ಶೂಟಿಂಗ್ ನೋಡಲು ಹೋಗಿದ್ದಾಗ, ಇವರನ್ನು ಕಂಡ ಡೈರೆಕ್ಟರ್ ಒಬ್ರು, ‘ಸಿನಿಮಾದಲ್ಲಿ ನಟಿಸೋಕೆ ಇಂಟ್ರೆಸ್ಟ್ ಇದ್ಯಾ’ ಅಂತ ಕೇಳಿದ್ರಂತೆ. ಅನುಷ್ಕಾ ಖುಷಿಯಿಂದ ಸಿನಿಮಾ ಒಪ್ಕೊಂಡಿದ್ರಂತೆ. ಆದ್ರೆ, ಸ್ವಲ್ಪ ದಿನದ ನಂತ್ರ ಡೈರೆಕ್ಟರ್ ಹೇಳ್ದೆ, ಕೇಳ್ದೆ ಬೇರೆ ಹೀರೋಯಿನ್ ಅನ್ನು ಸೆಲೆಕ್ಟ್ ಮಾಡ್ಕೊಂಡಿದ್ರಂತೆ. ಆಗ, ಅನುಷ್ಕಾ, ‘ಪರವಾಗಿಲ್ಲ ಬಿಡಿ ಸರ್. ನಿಮ್ಗೂ ನಿಮ್ ಮೂವಿಗೂ ಆಲ್ ದಿ ಬೆಸ್ಟ್ ‘ ಅಂತ ವಿಶ್ ಮಾಡಿ ಸುಮ್ನಾಗಿದ್ರಂತೆ. ಆದ್ರೆ, ಅನುಷ್ಕಾಗೆ ಕನ್ನಡ ಚಿತ್ರರಂಗದ ಮೇಲೆ ಬೇಜಾರಿಲ್ಲ. ಒಳ್ಳೇ ಸ್ಟೋರಿ ಸಿಕ್ಕರೆ ಕನ್ನಡ ಸಿನಿಮಾದಲ್ಲಿ ನಟಿಸ್ತಾರೆ. ಇತ್ತೀಚೆಗೆ ಫೇಸ್ ಬುಕ್ ಲೈವ್ ಬಂದಾಗ, ಅಭಿಮಾನಿಯೊಬ್ಬ ಕನ್ನಡದಲ್ಲಿ ನಟಿಸ್ತೀರ ಅಂತ ಕೇಳಿದಾಗ, ಒಂದೊಳ್ಳೆ ಸ್ಕ್ರಿಪ್ಟ್ ಬಂದ್ರೆ ಮಾಡ್ತೀನಿ ಅಂದಿದ್ರು. ಆದ್ರೆ, ತಾನು ಹಿಂದೆ ರಿಜೆಕ್ಟ್ ಆಗಿದ್ದ ಸುದ್ದೀನ ಎಲ್ಲೂ ಹೇಳ್ಕೊಂಡಿಲ್ಲ.

 

 

 

 

 

LEAVE A REPLY

Please enter your comment!
Please enter your name here

- Advertisment -

Most Popular

Recent Comments