ಪತಿ ಕೊಹ್ಲಿಯಂತೆ ಕ್ರಿಕೆಟ್ ಆಡಲು ರೆಡಿಯಾದ ಅನುಷ್ಕಾ ಶರ್ಮಾ!

0
355

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯಂತೆ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಕೂಡ ಕ್ರಿಕೆಟ್ ಆಡಲು ರೆಡಿಯಾಗಿದ್ದಾರೆ. ಆದ್ರೆ, ಕೊಹ್ಲಿಯಂತೆ ಬ್ಯಾಟ್​​ ಹಿಡಿದು ಮಾತ್ರವಲ್ಲ ಬೌಲಿಂಗ್​ನಲ್ಲೂ ಮಿಂಚಲಿದ್ದಾರೆ.
ಅರೆ, ಅನುಷ್ಕಾ ಆ್ಯಕ್ಟಿಂಗ್ ಬಿಟ್ಟು ಕ್ರಿಕೆಟ್​ ಆಡೋ ಮನಸ್ಸು ಮಾಡಿದ್ರಾ? ಕ್ರಿಕೆಟ್ ತರಬೇತಿ ಪಡೀತಾ ಇದ್ದಾರಾ? ವೃತ್ತಿಪರ ಕ್ರಿಕೆಟತ್ತ ಈಗ ಮುಖ ಮಾಡ್ತಿದ್ದಾರಾ? ಏನಿದು ಇಂಟ್ರೆಸ್ಟಿಂಗ್ ನ್ಯೂಸ್ ಅಂತೀರಾ? ಅನುಷ್ಕಾ ಕ್ರಿಕೆಟರ್ ಆಗ್ತಿರೋದು ಪಕ್ಕಾ..! ಆದ್ರೆ ರಿಯಲ್​​ ಆಗಿ ಅಲ್ಲ ರೀಲ್​ನಲ್ಲಿ!
ಹೌದು ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ, ಆಲ್​ರೌಂಡರ್ ಜುಲನ್ ಗೋಸ್ವಾಮಿ ಅವರ ಬಯೋಪಿಕ್​ನಲ್ಲಿ ಅನುಷ್ಕಾ ಶರ್ಮಾ ನಟಿಸುತ್ತಿದ್ದಾರೆ. ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ಈಗಾಗಲೇ ಟೀಸರ್ ಚಿತ್ರೀಕರಣ ನಡೆದಿದ್ದು, ಅನುಷ್ಕಾ ಶರ್ಮಾ ಟೀಮ್​ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಂಡಿರೋ ಫೋಟೋ ವೈರಲ್ ಆಗುತ್ತಿದೆ.

LEAVE A REPLY

Please enter your comment!
Please enter your name here