ಕೊಹ್ಲಿಗೆ ಆಟೋಗ್ರಾಫ್ ನೀಡಿದ 7ರ ಪೋರ..!

0
343

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಡೀ ವಿಶ್ವವೇ ಮೆಚ್ಚಿರುವ ಕ್ರಿಕೆಟಿಗ. ವಿರಾಟ್ ಅಂದ್ರೆ ಎಲ್ಲರಿಗೂ ಅಚ್ಚು-ಮೆಚ್ಚು…! ಭಾರತ ಕ್ರಿಕೆಟ್ ತಂಡದ ನಾಯಕ ಅಂದ್ಮೇಲೆ ಸಹಜವಾಗಿ ಅವರ ಆಟೋಗ್ರಾಫ್​ಗೆ ಪ್ರತಿಯೊಬ್ಬ ಅಭಿಮಾನಿಯೂ ಕಾಯ್ತಿರ್ತಾರೆ. ಕೊಹ್ಲಿ ಆಟೋಗ್ರಾಫ್ ಕೇಳಿದ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡುತ್ತಿರುವ ಫೋಟೋ, ವಿಡಿಯೋಗಳನ್ನು ಆಗಾಗ ನೋಡ್ತಿರ್ತೀರಿ. ಆದರೆ. ಯಾವತ್ತಾದ್ರೂ ಕೊಹ್ಲಿಗೇ ಯಾರಾದ್ರು ಆಟೋಗ್ರಾಫ್ ನೀಡಿದ್ದನ್ನು ಕಂಡಿದ್ದೀರಾ..!?

7ರ ಪೋರನೊಬ್ಬ ನಿಮ್ಗೆ ನನ್ನ ಆಟೋಗ್ರಾಫ್ ಬೇಕಾ ಅಂತ ಕೇಳಿ ಪ್ರೀತಿಯಿಂದ ಕೊಹ್ಲಿಗೇ ಆಟೋಗ್ರಾಫ್ ನೀಡಿದ್ದಾನೆ..!
ವೆಸ್ಟ್ ಇಂಡೀಸ್​ನ ಜಮೈಕಾದಲ್ಲಿ ಕೊಹ್ಲಿಯನ್ನು ಕಂಡ 7 ವರ್ಷದ ಪುಟ್ಟ ಅಭಿಮಾನಿಯೊಬ್ಬ ‘ನಿಮಗೆ ನನ್ನ ಆಟೋಗ್ರಾಫ್ ಬೇಕಾ’ಅಂತ ಕೊಹ್ಲಿಯನ್ನೇ ಕೇಳ್ತಾನೆ..! ಆಗ ಕೊಹ್ಲಿ ಖುಷಿಯಿಂದ ಕೊಡು ಅಂತ ಪುಟ್ಟ ಬಾಲಕನ ಆಟೋಗ್ರಾಫ್ ಪಡೀತಾರೆ. ಆ ವೇಳೆ ಕೊಹ್ಲಿಯ ಜೊತೆಯಲ್ಲಿದ್ದ ಪತ್ನಿ ಅನುಷ್ಕಾ ಶರ್ಮಾ ಕೂಡ ಸ್ಲೈಲ್ ಮಾಡ್ತಿರ್ತಾರೆ.. ಕೊಹ್ಲಿ ಬಾಲಕನ ಆಟೋಗ್ರಾಫ್ ಪಡೆದು ವಾವ್ ಅಂತಾರೆ..! ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

LEAVE A REPLY

Please enter your comment!
Please enter your name here