ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇಂದು ಒಂದೇ ದಿನದಲ್ಲಿ 11 ಕೊರೋನಾ ಪಾಸಿಟಿವ್ ಕೇಸ್ಗಳು ಕಂಡುಬಂದಿದ್ದು, ಕೊರೋನಾ ಸೋಂಕಿತರ ಸಂಖ್ಯೆ 226 ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಳಗಾವಿಯಲ್ಲಿ ಇಂದು ಹೊಸ 4 ಪ್ರಕರಣಗಳು ಕಂಡುಬಂದಿದೆ. ಬೆಂಗಳೂರಲ್ಲಿ 3 ಕೇಸ್ಗಳು ಪತ್ತೆಯಾಗಿದ್ದು, ಇನ್ನುಳಿದಂತೆ ಕಲಬುರಗಿಯಲ್ಲಿ 2 ಮಂದಿ ಸೋಂಕಿತರು, ಮೈಸೂರು ಹಾಗೂ ವಿಜಯಪುರದಲ್ಲಿ ತಲಾ ಒಬ್ಬರಲ್ಲಿ ಕೊರೋನಾ ದೃಢಪಟ್ಟಿದೆ.
ವಿಜಯಪುರದಲ್ಲಿ ಒಬ್ಬ ವೃದ್ಧೆಗೆ ಸೋಂಕು ತಗುಲಿದ್ದು, ವಿಜಯಪುರದಲ್ಲಿ ಮೊದಲ ಕೊರೋನಾ ಪಾಸಿಟಿವ್ ಕೇಸ್ ಇದಾಗಿದೆ. ಅವಿಭಕ್ತ ಕುಟುಂಬದಲ್ಲಿ ವೃದ್ಧೆಯ ಮನೆಯ 24 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನು ಅವರ ಟ್ರಾವೆಲ್ ಹಿಸ್ಟರಿ ಬಗ್ಗೆ ಜಿಲ್ಲಾಡಳಿತ ಪರಿಶೀಲನೆ ಮಾಡುತ್ತಿದೆ.