ಬೆಂಗಳೂರು: ಭಾರತೀಯ ಕ್ರಿಕೆಟ್ನ ನ್ಯೂ ಸೆನ್ಸೇಶನ್ ಕೆಎಲ್ ರಾಹುಲ್, ಆಸ್ಟ್ರೇಲಿಯಾ ವಿರುದ್ಧದ 3 ಮತ್ತು 4ನೇ ಟೆಸ್ಟ್ನಿಂದ ಹೊರಗುಳಿಯಲಿದ್ದಾರೆ. ಇದು ಟೀಮ್ ಇಂಡಿಯಾಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಈಗಾಗಲೇ ವಿರಾಟ್ ಕೊಹ್ಲಿ ಅನುಷ್ಕಾ ಡೆಲಿವರಿ ಸಲುವಾಗಿ ಭಾರತಕ್ಕೆ ಮರಳಿದ್ದಾರೆ. ಇನ್ನೂ ವೇಗಿಗಳಾದ ಮೊಹಮದ್ ಶಮಿ ಮತ್ತು ಉಮೇಶ್ ಯಾದವ್ ಇಂಜುರಿ ಸಮಸ್ಯೆಯಿಂದ ಅಲಭ್ಯರಾಗಿದ್ದಾರೆ. ಇನ್ನೂ ಕೋವಿಡ್ ನಿಯಮ ಉಲ್ಲಂಘನೆ ಆರೋಪದ ಮೇಲೆ ರೋಹಿತ್ ಶರ್ಮಾ, ರಿಶಭ್ ಪಂತ್, ನವದೀಪ್ ಸೈನಿ, ಪೃಥ್ವಿ ಶಾ, ಶುಭಮಾನ್ ಗಿಲ್ರನ್ನು ಕ್ವಾರಂಟೀನ್ ಮಾಡಲಾಗಿದೆ.
7 ನೇ ತಾರಿಖಿನಿಂದ ಆರಂಭವಾಗುವ 3 ನೇ ಟೆಸ್ಟ್ಗೆ ಇವರು ಬರುತ್ತಾರಾ ಅನ್ನೋದು ಇನ್ನೂ ಖಚಿತವಾಗಿಲ್ಲ. ಅಂಥದರಲ್ಲಿ ರಾಹುಲ್ ಕೂಡ ಇಂಜುರಿಯಿಂದಾಗಿ ಹೊರಗುಳಿಯುತ್ತಿರೋದು ಟೀಮ್ ಇಂಡಿಯಾಗೆ ದೊಡ್ಡ ಹೊಡೆತ ಉಂಟಾಗಿದೆ. ರಾಹುಲ್ ಪ್ರಾಕ್ಟೀಸ್ ಮಾಡುವ ಟೈಮ್ ನಲ್ಲಿ, ಅವರ ಎಡಗೈ ಮಣಿಕಟ್ಟು ಉಳುಕಿದೆ. ಹಾಗಾಗಿ ಅವರು ಬೆಂಗಳೂರಿನ ಎನ್ಸಿಎನಲ್ಲಿ ಫಿಟ್ನೆಸ್ ತರಬೇತಿ ಪಡೆಯಲಿದ್ದಾರೆ. ಅವರಿಗೆ 3 ವಾರಗಳ ಕಾಲ ಚಿಕಿತ್ಸೆ ನೀಡಬೇಕಾಗುತ್ತೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.